ದ್ವಿತೀಯ ಟೆಸ್ಟ್: ಸಂಕಷ್ಟದಲ್ಲಿ ನ್ಯೂಝಿಲೆಂಡ್
ಕ್ರೈಸ್ಟ್‌ಚರ್ಚ್, ಫೆ.22: ಆತಿಥೇಯ ನ್ಯೂಝಿಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ.
ಸೋಮವಾರ ಮೂರನೆ ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 121 ರನ್ ಗಳಿಸಿರುವ ಕಿವೀಸ್ ಇನಿಂಗ್ಸ್ ಸೋಲಿನಿಂದ ಪಾರಾಗಲು ಇನ್ನೂ 14 ರನ್ ಗಳಿಸಬೇಕಾಗಿದೆ. ಕೇನ್ ವಿಲಿಯಮ್ಸನ್(45) ಹಾಗೂ ಕೋರಿ ಆ್ಯಂಡರ್ಸನ್(9) ಕ್ರೀಸ್‌ನಲ್ಲಿದ್ದಾರೆ.
ವಿದಾಯದ ಪಂದ್ಯ ಆಡುತ್ತಿರುವ ಮೆಕಲಮ್ ಕೊನೆಯ ಟೆಸ್ಟ್‌ನಲ್ಲಿ 25 ರನ್ ಗಳಿಸಿದರು. ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್(0) ಶೂನ್ಯಕ್ಕೆ ಔಟಾಗಿ ಕಳಪೆ ಬ್ಯಾಟಿಂಗ್ ಮುಂದುವರಿಸಿದರು. ಟಿಮ್ ಲಾಥಮ್ 39 ರನ್ ಗಳಿಸಿದರು.
ಜೇಮ್ಸ್ ಪ್ಯಾಟಿನ್ಸನ್ 29ಕ್ಕೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
ಆಸ್ಟ್ರೇಲಿಯ 505: ಇದಕ್ಕೆ ಮೊದಲು 4 ವಿಕೆಟ್ ನಷ್ಟಕ್ಕೆ 363 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ 505 ರನ್ ಗಳಿಸಿ 135 ರನ್ ಮುನ್ನಡೆ ಸಾಧಿಸಿತು.
ಆಡಮ್ ವೋಗ್ಸ್(60) ಹಾಗೂ ಲಿಯೊನ್(33)ತಂಡದ ಮೊತ್ತವನ್ನು 500ರ ಗಡಿ ದಾಟಿಸಿದರು. ಕಿವೀಸ್‌ನ ಪರ ನೈಲ್ ವಾಗ್ನೆರ್ ಜೀವನಶ್ರೇಷ್ಠ ಬೌಲಿಂಗ್(6-106) ಮಾಡಿದರು.
3ನೆ ದಿನದ ಪಂದ್ಯ ಆರಂಭಕ್ಕೆ ಮೊದಲು 2011ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ಸಂಭವಿಸಿದ್ದ ಭೂಕಂಪದಿಂದ ಸಂತ್ರಸ್ತರ ಸ್ಮರಣಾರ್ಥ ಉಭಯ ತಂಡಗಳ ಆಟಗಾರರು ಐದು ನಿಮಿಷ ವೌನ ಪ್ರಾರ್ಥನೆ ಮಾಡಿದರು. ಕೈಗೆ ಕಪ್ಪುಪಟ್ಟಿ ಧರಿಸಿ ಆಡಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 370
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 505
(ಬರ್ನ್ಸ್ 170, ಸ್ಮಿತ್ 138, ವೋಗ್ಸ್ 60, ವಾಗ್ನೆರ್ 6-106)
ನ್ಯೂಝಿಲೆಂಡ್ ದ್ವಿತೀಯ ಇನಿಂಗ್ಸ್: 121/4
( ವಿಲಿಯಮ್ಸನ್ ಔಟಾಗದೆ 45, ಲಾಥಮ್ 39, ಮೆಕಲಮ್ 25, ಪ್ಯಾಟಿನ್ಸನ್ 3-29)