ಏಸು ತಮಿಳು ವಿಶ್ವಕರ್ಮ ಬ್ರಾಹ್ಮಣ, ಬೈಬಲ್ ಏಸು ಬೋಧನೆಯಲ್ಲ !
ಮುಂಬೈ , ಫೆ. 23 : ವಿ. ಡಿ. ಸಾವರ್ಕರ್ ರ ಸೋದರ ಹಾಗು ಆರೆಸ್ಸೆಸ್ ನ ಐದು ಸ್ಥಾಪಕರಲ್ಲಿ ಒಬ್ಬರಾದ ಗಣೇಶ್ ದಾಮೋದರ್ ಸಾವರ್ಕರ್ ಬರೆದ "ಕ್ರೈಸ್ಟ್ ಪರಿಚಯ್" ಎಂಬ 1946 ರಲ್ಲ್ಲಿ ಪ್ರಕಟವಾದ ಪುಸ್ತಕವನ್ನು ಮತ್ತೆ ಪ್ರಕಟಿಸಲಾಗುತ್ತಿದೆ. ಇದರಲ್ಲಿ ಏಸು ಕ್ರಿಸ್ತ ಹಾಗು ಕ್ರೈಸ್ತ ಧರ್ಮದ ಬಗ್ಗೆ ವಿಚಿತ್ರ ವಾದಗಳಿವೆ .
ಇದರ ವಿಶೇಷತೆ ಏನೆಂದರೆ , ಈ ಪುಸ್ತಕದ ಪ್ರಕಾರ ಏಸು ಕ್ರಿಸ್ತ ಹುಟ್ಟಿದ್ದು ತಮಿಳು ಹಿಂದೂವಾಗಿ. ಅವರು ಹುಟ್ಟಿನಿಂದ ವಿಶ್ವಕರ್ಮ ಬ್ರಾಹ್ಮಣ. ಅವರ ನಿಜ ಹೆಸರು ಕೇಶವ ಕೃಷ್ಣ, ಮಾತೃ ಭಾಷೆ ತಮಿಳು ಹಾಗು ಅವರ ಬಣ್ಣ ಕಡು ಕಪ್ಪು ಆಗಿತ್ತು. ಮತ್ತು ಕ್ರೈಸ್ತ ಧರ್ಮ ಹಿಂದೂ ಧರ್ಮದ ಒಂದು ಪಂಥ ಮಾತ್ರ !
ಸ್ವಾತಂತ್ರ್ಯ ವೀರ್ ಸಾವರ್ಕರ್ ರಾಷ್ಟ್ರೀಯ ಸ್ಮಾರಕ್ , ಈ ಮರಾಟಿ ಪುಸ್ತಕವನ್ನು ಫೆಬ್ರವರಿ ೨೬ ರಂದು ಬಿಡುಗಡೆ ಮಾಡಲಿದೆ. ಏಸು ಕ್ರಿಸ್ತ ಹುಟ್ಟಿದ್ದು ಎಲ್ಲಿ ಎಂಬುದರ ಬಗ್ಗೆ ಯಾವುದೇ ಪ್ರಸ್ತಾಪ ಮಾಡದ ಈ ಪುಸ್ತಕದ ಪ್ರಕಾರ ಫೆಲೆಸ್ತೀನ್ ಹಾಗು ಅರಬ್ ಪ್ರದೇಶಗಳು ಹಿಂದೂಗಳಿಗೆ ಸೇರಿದ್ದವು ಹಾಗು ಏಸು ಕ್ರಿಸ್ತ ಭಾರತಕ್ಕೆ ಭೇಟಿ ನೀಡಿ ಇಲ್ಲಿ ಯೋಗ ಕಲಿತಿದ್ದರು.
ಈ ಪುಸ್ತಕದ ಇನ್ನೊಂದು ಪ್ರಮುಖ ವಾದವೆಂದರೆ , ಬೈಬಲ್ ಏಸು ಕ್ರಿಸ್ತರ ಬೋಧನೆಯಲ್ಲ !