ಜೆ ಎನ್ ಯು ನಲ್ಲಿ 3000 ಕಾಂಡೋಮ್ ಗಳು, 3000 ಬಿಯರ್ ಬಾಟಲ್ ಗಳು ಪ್ರತಿದಿನ ಸಿಗುತ್ತವೆ
ಹೊಸದಿಲ್ಲಿ , ಫೆ. 23 : "ಜವಹರಲಾಲ್ ನೆಹರು ವಿವಿ ಅಪರಾಧಗಳ ತಾಣ. ಅಲ್ಲಿ ವಿದ್ಯಾರ್ಥಿಗಳು ಸದಾ ಮದ್ಯ ಹಾಗು ಮಾದಕ ವಸ್ತುಗಳ ಅಮಲಿನಲ್ಲಿರುತ್ತಾರೆ, ರಾತ್ರಿಯಿಡೀ ನಗ್ನರಾಗಿ ಡ್ಯಾನ್ಸ್ ಮಾಡುತ್ತಾರೆ." ಹೀಗೊಂದು ಆರೋಪ ಮಾಡಿದವರು ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನದೇವ್ ಅಹುಜ !
ಅಹುಜ ತಮ್ಮ (ವಿತಂಡ) ವಾದವನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆ ಹಾಗು ಅಂಕಿ ಅಂಶಗಳನ್ನೂ ಒದಗಿಸಿದ್ದಾರೆ. ಜೆ ಎನ್ ಯು ನಲ್ಲಿ ಪ್ರತಿದಿನ 3000 ಬಿಯರ್ ಬಾಟಲ್ ಗಳು , 2000 ಬೇರೆ ಮದ್ಯದ ಬಾಟಲ್ ಗಳು, 3000 ಕಾಂಡೋಮ್ ಗಳು, 500 ಗರ್ಭ ನಿರೋಧಕ ಚುಚ್ಚು ಮದ್ದುಗಳು , 10,000 ಸಿಗರೇಟು ತುಂಡುಗಳು, 4000 ಬೀಡಿ ತುಂಡುಗಳು, 50,000 ಸಣ್ಣ , ದೊಡ್ಡ ಮೂಳೆಗಳು ಪ್ರತಿದಿನ ಸಿಗುತ್ತವೆ ಎಂಬ ಆಘಾತಕಾರಿ ಮಾಹಿತಿಯನ್ನು ಈ ಬಿಜೆಪಿ ಶಾಸಕ ಸಂಶೋಧನೆ ಮಾಡಿ ಕಂಡುಕೊಂಡಿದ್ದಾರೆ !
ಸೋಮವಾರ ಅಲ್ವಾರ್ ನಲ್ಲಿ ಜೆ ಎನ್ ಯು ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಕಾಗದದ ತುಂಡೊಂದನ್ನು ನೋಡಿ ಈ ಭಯಾನಕ ಮಾಹಿತಿಗಳನ್ನು ಅಹುಜಾ ಬಹಿರಂಗಪಡಿಸಿದ್ದಾರೆ. ಆದರೆ ತಮ್ಮ ಈ ಭಾರೀ ಸಂಶೋಧನೆಯ ಮೂಲವನ್ನು ಮಾತ್ರ ಅವರು ತಿಳಿಸಿಲ್ಲ.
ಜೆ ಎನ್ ಯು ನಲ್ಲಿ ಒಟ್ಟು 7000 ವಿದ್ಯಾರ್ಥಿಗಳಿದ್ದಾರೆ. ಅಹುಜ ಹೇಳಿಕೆ ಹೌದಾದರೆ, ಅಲ್ಲಿ ಪ್ರತಿದಿನ ಇಬ್ಬರ ಜೋಡಿಯಂತೆ 6000 ವಿದ್ಯಾರ್ಥಿಗಳು ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಪ್ರತಿ ಜೋಡಿ ಒಂದು ಬಾಟಲ್ ಬಿಯರ್ ಕುದಿಯುತ್ತದೆ. ಉಳಿದ ವಿದ್ಯಾರ್ಥಿಗಳು ಅಹುಜ ಹೇಳಿದಂತೆ ಬೇರೆ 2000 ಬಾಟಲ್ ಮದ್ಯವನ್ನು ಬಳಸುತ್ತಾರೆ , ಪ್ರತಿದಿನ !
ಅಹುಜ ಪ್ರಕಾರ " ಅಫ಼್ಝಲ್ ಗುರುವನ್ನು ಬೆಂಬಲಿಸುವ ಈ ದೇಶದ್ರೋಹಿ ವಿದ್ಯಾರ್ಥಿಗಳು ಸದಾ ಮಾಂಸ ತಿನ್ನುತ್ತಿರುತ್ತಾರೆ !
ಈ ಎಲ್ಲವುಗಳಿಗೂ ಸರಕಾರದಿಂದಲೇ ಹಣ ನೀಡಲಾಗುತ್ತದೆಯೇ ಎಂಬುದನ್ನೂ ಅಹುಜ ಸ್ಪಷ್ಟಪಡಿಸಿಲ್ಲ.