ನೇಪಾಲದಲ್ಲಿ ಲಘು ವಿಮಾನ ಪತನ; 23 ಪ್ರಯಾಣಿಕರು ಮೃತಪಟ್ಟಿರುವ ಶಂಕೆ

Update: 2016-02-24 06:55 GMT

ಪೋಖ್ರಾ, ಫೆ.24: ನೇಪಾಲದಲ್ಲಿ ಇಂದು ಬೆಳಗ್ಗೆ ನಾಪತ್ತೆಯಾಗಿದ್ದ  ಲಘು ವಿಮಾನ ನೇಪಾಲದ ಪರ್ವತ ಶ್ರೇಣಿಯಲ್ಲಿ ಪತನಗೊಂಡಿದ್ದು, ವಿಮಾನದ ಅವಶೇಷಗಳು ಪತ್ತೆಯಾಗಿವೆ, ವಿಮಾನದಲ್ಲಿದ್ದ ಎಲ್ಲ 23 ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
 ತಾರಾ ವಾಯು ಸಂಸ್ಥೆಗೆ ಸೇರಿದ ಈ ವಿಮಾನ ಪೋಖ್ರಾದಿಂದ ಜೋಮ್‌ ಸೋಮ್‌ಗೆ ಹೊರಟಿತ್ತು. ಬೆಳಗ್ಗೆ 7:45ಕ್ಕೆ ಪೋಖ್ರಾ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಟೇಕ್‌ಆಫ್ ಆದ ಕೆಲವೇ ಹೊತ್ತಿನಲ್ಲಿ ಸಂಪರ್ಕ ಕಡಿದುಕೊಂಡಿತ್ತು. ವಿಮಾನದಲ್ಲಿ ಒಟ್ಟು 23 ಪ್ರಯಾಣಿಕರು ಇದ್ದರೆಂದು  ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News