ತಂದೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಜೀವ್ ಹಂತಕಿ ನಳಿನಿಗೆ 12 ಗಂಟೆಗಳ ಪೆರೋಲ್

Update: 2016-02-24 06:33 GMT

ವೆಲ್ಲೂರು : ರಾಜೀವ್ ಗಾಂಧಿ ಹತ್ಯೆ ಪ್ರಕರಣದ ದೋಷಿ ನಳಿನಿ ಶ್ರೀಹರನ್ ತಂದೆ ತೀರಿಕೊಂಡ ಹಿನ್ನೆಲೆಯಲ್ಲಿಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಕೆಗೆ 12 ಗಂಟೆಗಳ ಪೆರೋಲ್ ಮಂಜೂರು ಮಾಡಲಾಗಿದೆ. ಆಕೆ ಸಂಜೆಯೊಳಗಾಗಿ ಮತ್ತೆ ಜೈಲಿಗೆ ಹಿಂದಿರುಗಲಿದ್ದಾರೆ,’’ಎಂದು ವೆಲ್ಲೂರು ಕೇಂದ್ರ ಕಾರಾಗೃಹ(ಮಹಿಳೆಯರ ಜೈಲು)ಇದರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಳಿನಿ ಮಂಗಳವಾರ ಮುಂಜಾವು 6.50ಕ್ಕೆ ಪೊಲೀಸ್ ಎಸ್ಕಾರ್ಟ್ ಜತೆ ತನ್ನ ತಂದೆ ಶಂಕರ ನಾರಾಯಣನ್ ಅವರ ಅಂತ್ಯಕ್ರಿಯೆಗೆ ತೆರಳಿದ್ದಾಳೆ.

ಜನವರಿ 28, 1988ರಲ್ಲಿ ನಳಿನಿಗೆ ವಿಚಾರಣಾ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದ್ದರೆ, ಆಕೆಯ ಶಿಕ್ಷೆಯನ್ನು ಆಗಿನ ತಮಿಳುನಾಡು ರಾಜ್ಯಪಾಲರು ಎಪ್ರಿಲ್ 24,2000ರಂದು ಜೀವಾವಧಿಗೆ ಬದಲಿಸಿದ್ದರು. ತಾನೀಗಾಗಲೇ 24 ವರ್ಷ ಜೈಲು ಶಿಕ್ಷೆಯನ್ನು ನುಭವಿಸಿರುವುದರಿಂದ ತನಗೆ ಅವಧಿಪೂರ್ವ ಬಿಡುಗಡೆ ಮಾಡಬೇಕೆಂದು ತಮಿಳುನಾಡು ಸರಕಾರಕ್ಕೆ ಆದೇಶಿಸಬೇಕೆಂದು ಕೋರಿ ಆಕೆ ಮದ್ರಾಸ್ ಹೈಕೋರ್ಟಿಗೆ ಅಪೀಲನ್ನು ಈಗಾಗಲೇ ಸಲ್ಲಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News