ವೃತ್ತಿಪರ ಶಿಕ್ಷಣಕ್ಕೆ ಸಾಲ ಸೌಲಭ್ಯ

Update: 2016-02-24 18:08 GMT

ಉಡುಪಿ, ಫೆ.24: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಉಡುಪಿ ಇದರ ವತಿಯಿಂದ ಮುಸ್ಲಿಮ್, ಕ್ರಿಶ್ಚಿಯನ್, ಜೈನ್ಸ್, ಸಿಖ್, ಆಂಗ್ಲೋ ಇಂಡಿಯನ್ ಹಾಗೂ ಪಾರ್ಸಿ ಜನಾಂಗದ ವಿದ್ಯಾರ್ಥಿಗಳಲ್ಲಿ 2016-17ನೆ ಸಾಲಿನ ಸಿಇಟಿ ಪರೀಕ್ಷೆಗೆ ಹಾಜರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಅಂದರೆ, ವೈದ್ಯಕೀಯ, ಇಂಜಿನಿಯರಿಂಗ್, ದಂತ ವೈದ್ಯಕೀಯ, ಬಿ.ಟೆಕ್, ಬಿಫಾರ್ಮಾ, ಡಿಪಾರ್ಮ, ಬಿ.ಎ.ಎಂ.ಎಸ್, ಬಿ.ಯು.ಎಂ.ಎಸ್ ಮುಂತಾದ ಸ್ನಾತಕೋತ್ತರ ಪದವಿಗಳಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಳ್ಳಲು ನಿಗಮದಿಂದ ವಾರ್ಷಿಕ ಗರಿಷ್ಠ 50,000ರೂ.ವರೆಗೆ ಶೇ.2ರ ಸೇವಾ ಶುಲ್ಕದ ಆಧಾರದ ಮೇಲೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಈ ಸಂಬಂಧ 2016-17ನೆ ಸಾಲಿನಲ್ಲಿ ಮೇಲಿನ ವೃತ್ತಿಪರ ಕೋರ್ಸ್‌ಗಳಿಗೆ ಸೇರ ಬಯಸುವ ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನಿಗಮದ ಜಿಲ್ಲಾ ಕಚೇರಿಯಿಂದ ಅರ್ಜಿಗಳನ್ನು ಪಡೆದು ದಾಖಲಾತಿಗಳೊಂದಿಗೆ ಮಾರ್ಚ್ 31ರೊಳಗೆ ಸಲ್ಲಿಸಬಹುದಾಗಿದೆ. ಈಗಾಗಲೇ ಕಾಲೇಜು ಮುಖ್ಯಸ್ಥರ ಮುಖಾಂತರ ಅರ್ಜಿಗಳನ್ನು ಪಡೆದ ವಿದ್ಯಾರ್ಥಿಗಳು ಜಿಲ್ಲಾ ಕಚೇರಿಗೆ ಅಗತ್ಯ ಸಾಮಾನ್ಯ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಸಲ್ಲಿಸಬೇಕಾದ ದಾಖಲಾತಿಗಳು- ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾರ್ಷಿಕ ವರಮಾನ ಆರು ಲಕ್ಷ ರೂ. ಒಳಗಿರಬೇಕು. ಎಸೆಸೆಲ್ಸಿ ಅಂಕಪಟ್ಟಿ, ರೇಶನ್‌ಕಾರ್ಡ್, ಆಧಾರ್‌ಕಾರ್ಡ್, ಸಿಇಟಿ ಅಪ್ಲಿಕೇಶನ್‌ನ ನಕಲು ಪ್ರತಿ ಹಾಗೂ ನಾಲ್ಕು ಭಾವಚಿತ್ರಗಳು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ, ರಜತಾದ್ರಿ, ಜಿಲ್ಲಾಧಿಕಾರಿಗಳ ಸಂಕೀರ್ಣ, ಕೊಠಡಿ ಸಂಖ್ಯೆ ಎ-207, 1ನೆ ಮಹಡಿ ಮಣಿಪಾಲ, ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ 0820-2574990ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News