×
Ad

ಬಿಜೆಪಿ ನನ್ನ ಪ್ರಥಮ ಹಾಗೂ ಕೊನೆಯ ಪಕ್ಷ: ಶತ್ರುಘ್ನ ಸಿನ್ಹಾ

Update: 2016-02-25 17:01 IST

ಹೈದರಾಬಾದ್: ಭಿನ್ನಮತೀಯ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಬಿಜೆಪಿ ತನ್ನ ಪ್ರಥಮ ಹಾಗೂ ಕೊನೆಯಪಕ್ಷವಾಗಿದೆ ಎಂದು ಪತ್ರಕರ್ತರನ್ನು ಉದ್ದೇಶಿಸಿ ಹೇಳಿದ್ದಾರೆ.

 ಸಿನ್ಹಾ ಪಕ್ಷವನ್ನು ಟೀಕಿಸುತ್ತಿರುವುದರಿಂದ ಅವರು ಪಕ್ಷ ತೊರೆಯಬೇಕೆಂಬ ಸಲಹೆಯನ್ನು ಅವರ ಬಿಹಾರದ ಪಕ್ಷದ ಗೆಳೆಯರು ಮುಂದಿಟ್ಟಿದ್ದಕ್ಕೆ ಹೀಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಟ-ರಾಜಕಾರಣಿ ಸಿನ್ಹಾ, ತನಗೆ ಪ್ರದಾನಿ ಮೋದಿಯವರಲ್ಲಿ ಬಹಳ ಗೌರವವಿದೆ ಎಂದೂ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ತನ್ನನ್ನು ಯಾರು ರಾಜೀನಾಮೆಗೆ ಸೂಚಿಸುತ್ತಿದ್ದಾರೋ ಅವರೇ ಬಿಹಾರದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣರಾಗಿದ್ದಾರೆ. ಅವರೇ ಸ್ವಯಂ ಹೊರ ಹೋಗುವ ದಾರಿಯಲ್ಲಿದ್ದಾರೆ. ತಮ್ಮ ಮುಖವನ್ನು ತೋರಿಸಲು ಲಾಯಕ್ಕಾಗಿಲ್ಲ. ತಮ್ಮ ಹತಾಶೆಯನ್ನು ಹೀಗೆ ಬಹಿರಂಗಪಡಿಸುತ್ತಿದ್ದಾರೆ ಎಂದು ಅವರು ತನಗೆ ಪಕ್ಷ ತೊರೆಯಲು ಸಲಹೆಯಿತ್ತವರನ್ನು ಕಟುವಾಗಿ ಶತ್ರುಘ್ನ ಟೀಕಿಸಿದ್ದಾರೆ. ಈ ಬಿಜೆಪಿ ನಾಯಕರು ಮೊದಲು ತಮ್ಮ ವಿಷಯದತ್ತ ಗಮನಹರಿಸಲಿ ಎಂದು ಪತ್ರಕರ್ತರನ್ನುದ್ದೇಶಿಸಿ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News