ಐದರ ಹರೆಯ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿ ಪರಾರಿ
Update: 2016-02-25 17:05 IST
ಸಹಾರನಪುರ: ಉತ್ತರ ಪ್ರದೇಶದ ಸಹಾರನಪುರದ ನಕುಡ ಕ್ಷೇತ್ರದಲ್ಲಿ ಐದು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಘಟನೆ ಬಹಿರಂಗವಾಗಿದೆ. ಪೊಲೀಸರು ತಿಳಿಸಿರುವ ಪ್ರಕಾರ ಸಂಬಂಧಿಕನಾದ ಜಗ್‌ಪಾಲ್ ಎಂಬ ಯುವಕ ಐದು ವರ್ಷದ ಎಳೆಯ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಘಟನೆಯ ನಂತರ ಆರೋಪಿ ಪರಾರಿಯಾಗಿದ್ದಾನೆ.
ಸಂತ್ರಸ್ತ ಮಗುವನ್ನು ಗಂಭೀರ ಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಧೋಲ ಮಾಜರಾದ ನಿವಾಸಿ ಜಗಪಾಲ್ ವಿರುದ್ಧ ಗಂಭೀರ ಕಲಂ ಪ್ರಕಾರ ಪ್ರಕರಣದಾಖಲಿಸಲಾಗಿದೆ. ಪೊಲೀಸರು ಆರೋಪಿಯ ಪತ್ತೆಕಾರ್ಯದಲ್ಲಿ ನಿರತರಾಗಿದ್ದಾರೆ.