ಸಂಸತ್ತಿನಲ್ಲಿ ಸ್ಮ್ರತಿ ಇರಾನಿಯ ನುಡಿಮುತ್ತುಗಳು ಮತ್ತು ವಾಸ್ತವಗಳು
ನವದೆಹಲಿ : ವಿಪಕ್ಷಗಳಿಂದ ತೀವ್ರ ವಾಗ್ದಾಳಿಗೆ ಗುರಿಯಾದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಬುಧವಾರ ಲೋಕ ಸಭೆಯಲ್ಲಿ ಆವೇಶಭರಿತ ಹೇಳಿಕೆಯೊಂದನ್ನು ನೀಡಿ ಕನ್ಹಯ್ಯ ಕುಮಾರ್ ಹಾಗೂ ಇತರ ಕೆಲವು ವಿದ್ಯಾರ್ಥಿಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಸ್ವತಹ ಜೆಎನ್‌ಯು ಅಧಿಕಾರಿಗಳೇ ನೋಡಿದ್ದಾರೆಂದು ಹೇಳಿದರು.
ಸ್ಮತಿ ನುಡಿಮುತ್ತುಗಳು
ಸ್ಮತಿ ಇರಾನಿ ಸಂಸತ್ತಿನಲ್ಲಿ ಉಚ್ಛರಿಸಿದ ಕೆಲವೊಂದು ಏಕ ಪಂಕ್ತಿಗಳು ಇಲ್ಲಿವೆ. ಕೆಲವೊಂದು ವಾಕ್ಯಗಳನ್ನು ಅವರು ಗದ್ಗದಿತರಾಗಿ ನುಡಿದಿದ್ದಾರೆ.
* ಮುಝೆ ಸೂಲಿ ಪರ್ ಛಢಾನಾ ಚಾಹತೇ ಹೋ... ಅಮೇಠಿ ಲಡ್ನೇ ಕಿ ಸಝಾ ದೋಗೆ ಮುಜ್ಹೇ? (ನೀವು ನನ್ನನ್ನು ನೇಣಿಗೇರಿಸುತ್ತೀರೇನು... ಅಮೇಠಿಯಿಂದ ಸ್ಪರ್ಧಿಸಿದ್ದಕ್ಕಾಗಿ ನನಗೆ ಶಿಕ್ಷೆ ನೀಡುತ್ತೀರೇನು?) ಇರಾನಿ ರಾಹುಲ್ ಗಾಂಧಿಯ ವಿರುದ್ಧ ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
* ನಾನು ನಿಮ್ಮ ದೇಶಭಕ್ತಿಯನ್ನು ಪ್ರಮಾಣೀಕರಿಸುತ್ತಿಲ್ಲ, ನನ್ನ ದೇಶಭಕ್ತಿಯನ್ನು ಕೀಳಾಗಿಸಬೇಡಿ. ನನಗೆ ನನ್ನದೇ ಆದ ಭಾರತದ ಒಂದು ಕಲ್ಪನೆಯಿದೆ. ಅದನ್ನು ಕೀಳಾಗಿಸಬೇಡಿ.
* ಜನ್ಮ ನೀಡುವ ತಾಯಿಯೊಬ್ಬಳು ಜೀವಗಳನ್ನು ತೆಗೆಯುವುದಿಲ್ಲ.
* ಮಕ್ಕಳು ತಪ್ಪು ಮಾಡಿದ್ದಾರೆ ಹಾಗೂ ನಾವು ಅವರನ್ನು ಕ್ಷಮಿಸಬೇಕು ಎಂದು ಕೆಲ ಜನರು ಹೇಳುತ್ತಾರೆ.ಆದರೆ ಜೆಎನ್‌ಯುವಿನಲ್ಲಿ ಕೆಲವು ಮಕ್ಕಳನ್ನು ಸರಕಾರದ ವಿರುದ್ಧ ಎತ್ತಿ ಕಟ್ಟಲಾಗಿದೆ.
* ಜೆಎನ್‌ಯುವಿನಲ್ಲಿರುವ ಒಂದು ಕರಪತ್ರವು ಮಹಿಷಾಸುರನನ್ನು ಹೊಗಳುತ್ತಾ ಒಬ್ಬ ಲೈಂಗಿಕ ಕಾರ್ಯಕರ್ತೆ ದುರ್ಗಾಳನ್ನು ಆತನನ್ನು ಕೊಲ್ಲಲು ಬಾಡಿಗೆಗೆ ಗೊತ್ತು ಮಾಡಲಾಗಿದೆ ಎಂದು ಹೇಳಿದೆ. ಈ ವಿಚಾರವನ್ನು ಯಾರಾದರೂ ಕೊಲ್ಕತ್ತಾದ ಬೀದಿಗಳಿಗೆ ಕೊಂಡು ಹೋಗಲು ತಯಾರಿದ್ದಾರೇನು? ಕೊಲ್ಕತ್ತಾದ ರಸ್ತೆಗಳಲ್ಲಿ ಈ ಬಗ್ಗೆ ಮಾತನಾಡಲು ಯಾರು ತಯಾರಿದ್ದಾರೆಂದು ನಾನು ತಿಳಿಯಬಯಸುತ್ತೇನೆ. ಮಾರ್ಕ್ಸಿಸ್ಟರೇ?
* ನಾನು ಶಿಕ್ಷಣವನ್ನು ಕೇಸರೀಕರಣಗೊಳಿಸಲು ಯತ್ನಿಸಿದ್ದೇನೆಂದು ಯುಪಿಎ ಆಡಳಿತದಲ್ಲಿ ನೇಮಕವಾದ ಯಾವುದೇ ವಿಸಿ ಹೇಳಿದರೆ ನಾನು ರಾಜಕೀಯ ತೊರೆಯುತ್ತೇನೆ.
ಸಚಿವೆ ಸ್ಮತಿ ಇರಾನಿ ಲೋಕಸಭೆಯಲ್ಲಿಬುಧವಾರ ಮಂಡಿಸಿದ ಕೆಲವೊಂದು ಅಂಶಗಳು ಹಾಗೂ ಅವುಗಳು ಸತ್ಯ ಪರೀಕ್ಷೆಯಲ್ಲಿ ಎಲ್ಲಿ ನಿಲ್ಲುತ್ತವೆಯೆಂಬುದನ್ನು ಇಲ್ಲಿ ಪರಿಶೀಲಿಸಬಹುದು.
ಜೆಎನ್‌ಯು ವರದಿ
ಉಮರ್ ಖಾಲಿದ್, ಕನ್ಹಯ್ಯ ಕುಮಾರ್, ಅನಿರ್ಬನ್ ಭಟ್ಟಾಚಾರ್ಯ ಹಾಗೂ ನಾಲ್ಕು ಮಂದಿ ಇತರ ವಿದ್ಯಾರ್ಥಿಗಳು ಎರಡು ದಿನಗಳ ಹಿಂದೆನಡೆದ ರ್ಯಾಲಿಯೊಂದರಲ್ಲಿ ಭಾಗವಹಿಸಿ ಕಾಶ್ಮೀರದ ಸ್ವಾತಂತ್ರ್ಯ ಹಾಗೂ ಭಾರತದ ವಿನಾಶವನ್ನು ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದರೆಂದು ಹೇಳುವ ಜೆಎನ್‌ಯು ಸುರಕ್ಷಾ ಸಿಬ್ಬಂದಿಯು ಫೆಬ್ರವರಿ 11,2016ರವರದಿಯೊಂದನ್ನು ಸಚಿವೆ ಉಲ್ಲೇಖಿಸಿದ್ದರು. ‘‘ಜೆಎನ್‌ಯು ಸುರಕ್ಷಾ ಸಿಬ್ಬಂದಿಗೆ ಸರಕಾರದೊಂದಿಗೆ ಯಾವುದೇ ಸಂಬಂಧವಿಲ್ಲ,’’ಎಂದು ಸಚಿವೆ ಹೇಳಿದ್ದರು.
ಸತ್ಯಾಂಶ : ಜೆಎನ್‌ಯುವಿನಲ್ಲಿ ಖಾಸಗಿ ಸುರಕ್ಷಾ ಸಿಬ್ಬಂದಿಯಿದ್ದರೂ ಘೋಷಣೆಗಳನ್ನು ಕೂಗಿದವರೆನ್ನಲಾದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದುಗೃಹ ಸಚಿವರು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಪಷ್ಟವಾಗಿ ಹೇಳಿದಮೇಲೆ ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನುಪೊಲೀಸರಿಗೆ ಹಾಗೂ ಕೇಂದ್ರ ಸರಕಾರಕ್ಕೆ ಬಿಟ್ಟುಕೊಟ್ಟ ವಿಶ್ವವಿದ್ಯಾನಿಲಯದ ಆಡಳಿತದಿಂದಲೇ ಅವರು ನೇಮಕ ಮಾಡಲ್ಪಟ್ಟವರಾಗಿದ್ದಾರೆ.
ಜೆಎನ್‌ಯು ಸಮಿತಿ
‘‘ಜೆಎನ್‌ಯುವಿನ ಆಂತರಿಕ ಸಮಿತಿಯು ಶಿಕ್ಷಕರು ಹಾಗೂ ವಿಶ್ವವಿದ್ಯಾನಿಲಯದ ರೆಕ್ಟರ್ ಅವರನ್ನೊಳಗೊಂಡಿದೆ... ಆದರೆ ನಾವು ಅವರನ್ನು ನೇಮಿಸಿಲ್ಲ.... ಈ ವಿದ್ಯಾರ್ಥಿಗಳು ಹೊರಗಿನ ನೋಟಕ್ಕೆ ಆರೋಪಿಗಳು ಎಂದು ತೀರ್ಮಾನಿಸಿದ್ದು ಹಾಗೂ ಅವರನ್ನು ವಿಚಾರಣೆಯ ಅವಧಿಯವರೆಗೆ ಸಸ್ಪೆಂಡ್ ಮಾಡಲಾಗಿದೆ.’’
ಸತ್ಯಾಂಶ :ವಿದ್ಯಾರ್ಥಿಗಳ ವಾದವನ್ನು ಆಲಿಸದೆ, ಅವರನ್ನು ಒಂದು ದಿನದೊಳಗೆ ಸಸ್ಪೆಂಡ್ ಮಾಡಿದ್ದಕ್ಕೆ ಜೆಎನ್‌ಯುವಿನ ಹೊಸ ಉಪಕುಲಪತಿಗಳಿಂದ ನೇಮಿತವಾದ ವಿಶ್ವವಿದ್ಯಾನಿಲಯದ ಆಂತರಿಕ ಸಮಿತಿ ಟೀಕೆಯನ್ನು ಎದುರಿಸುತ್ತಿದೆ.
ಎರಡು ಪತ್ರಗಳು
ಕಾಂಗ್ರೆಸ್ ಸಂಸದ ಹನುಮಂತ ರಾವ್ ಅವರು ಹೈದರಾಬಾದ್ ವಿಶ್ವವಿದ್ಯಾನಿಲಯದ ಬಗ್ಗೆ ಬರೆದ ಪತ್ರವನ್ನು ಸಂಸ್ಥೆಗೆ ಕಳುಹಿಸಿರುವ ತನ್ನ ಸಚಿವಾಲಯದ ನಿರ್ಧಾರವನ್ನು ಇರಾನಿ ಉಲ್ಲೇಖಿಸಿದ್ದರು. ಬಿಜೆಪಿ ಸಂಸದ ಬಂಡಾರು ದತ್ತಾತ್ರೇಯರವರು ಬರೆದ ಪತ್ರವನ್ನು ನೆನೆಪಿಸಲು ತನ್ನ ತಂಡವುವಿಶ್ವವಿದ್ಯಾಲಯಕ್ಕೆ ಬರೆದ ಹಲವಾರು ಪತ್ರಗಳನ್ನು ಸಮರ್ಥಿಸಲು ಸಚಿವೆ ಹೀಗೆ ಮಾಡಿದರು. ಜನವರಿಯಲ್ಲಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಸಂಸದನ ಪತ್ರ ಹಾಗೂ ಈ ಬಗ್ಗೆ ಸಚಿವಾಲಯ ತೋರಿದ ಅತೀವ ಆಸಕ್ತಿಯತ್ತ ವಿಪಕ್ಷಗಳು ಬೆರಳು ತೋರಿಸಿವೆ. ‘‘ನಮ್ಮ ಸಿದ್ಧಾಂತಗಳು ಸಂಪೂರ್ಣವಾಗಿ ಭಿನ್ನವಾಗಿದ್ದಾಗಲೂ ಸಹ ಪ್ರತಿಯೊಬ್ಬ ಸಂಸದ ಬರೆದ ಪತ್ರವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ,’’ಎಂದು ಸಚಿವೆ ಹೇಳಿದ್ದರು.
ಸತ್ಯಾಂಶ :ಇರಾನಿಯವರ ಸಚಿವಾಲಯ ರಾವ್ ಹಾಗೂ ದತ್ತಾತ್ರೇಯ ಇಬ್ಬರೂ ಬರೆದ ಪತ್ರಗಳನ್ನು ಹೈದರಾಬಾದ್ ವಿಶ್ವವಿದ್ಯಾಲಯಕ್ಕೆರವಾನಿಸಿದೆ. ಆದರೆ ಎರಡೂ ಪತ್ರಗಳನ್ನು ಒಂದೇ ಎಂದು ಹೇಳುವುದು ಸೇಬುಹಣ್ಣನ್ನು ಕಿತ್ತಳೆ ಹಣ್ಣು ಎಂದಂತೆ. ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ ಹೆಚ್ಚುತ್ತಿರುವ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಗಮನ ಸೆಳೆಯುವ ಉದ್ದೇಶವನ್ನು ರಾವ್ ಅವರ ಪತ್ರ ಹೊಂದಿದ್ದರೆ, ವೇಮುಲ ಸದಸ್ಯನಾಗಿದ್ದ ಅಂಬೇಡ್ಕರ್ ಸ್ಟೂಡೆಂಟ್ಸ್ ಎಸೋಸಿಯೇಶನ್ (ಎಎಸ್‌ಎ)- ‘ದೇಶ ವಿರೋಧಿ’ ಎಂದು ದತ್ತಾತ್ರೇಯ ಅವರ ಪತ್ರ ಘೋಷಿಸಿತ್ತು. ವಿಶ್ವವಿದ್ಯಾಲಯವುರಾವ್ ಪತ್ರವನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ವೇಮುಲಾ ಆತ್ಮಹತ್ಯೆಯಿಂದ ಸಾಬೀತಾಗಿದ್ದರೆ, ದತ್ತಾತ್ರೇಯ ಅವರ ಪತ್ರ ಹಾಗೂ ಅದನ್ನು ನೆನಪಿಸಲು ಸಚಿವಾಲಯದಿಂದ ಸರಣಿ ಪತ್ರಗಳು ಬಂದ ನಂತರ ವಿಶ್ವವಿದ್ಯಾನಿಯದ ಕಾರ್ಯಕಾರಿ ಕೌನ್ಸಿಲ್ಅದರ ಬಗ್ಗೆ ಸೂಕ್ತ ಕ್ರಮ ಕೈಗೊಂಡಿತ್ತು.
ರೋಹಿತ್ ಉಚ್ಛಾಟನೆ
ಹೈದರಾಬಾದ್ ವಿಶ್ವವಿದ್ಯಾಲಯದ ಕಾರ್ಯಕಾರಿ ಕೌನ್ಸಿಲ್ ವೇಮುಲಾ ಹಾಗೂ ಇತರ ವಿದ್ಯಾರ್ಥಿಗಳನ್ನು‘ಉಚ್ಛಾಟಿಸಲು’ ತೀರ್ಮಾನಿಸಿತೆಂದು ಸಚಿವೆ ಇರಾನಿ ಹೇಳಿದರು.
ಸತ್ಯಾಂಶ :ಕಾರ್ಯಕಾರಿ ಕೌನ್ಸಿಲ್ ಅವರನ್ನು ಕೇವಲ ಹಾಸ್ಟೆಲ್‌ನಿಂದ ಹೊರದಬ್ಬಿತ್ತು. ಈ ಕ್ರಮದಿಂದ ಹೈದರಾಬಾದ್ ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ ಎಬಿವಿಪಿ ಹಾಗೂ ಎಎಸ್‌ಎ ಸದಸ್ಯ ವಿದ್ಯಾರ್ಥಿಗಳ ನಡುವೆ ಉಂಟಾದ ಹೊಡೆದಾಟದ ಬಗ್ಗೆ ಸಚಿವೆ ಮೌನ ತಾಳಿದ್ದರು. ಎಬಿವಿಪಿ ನಾಯಕನೊಬ್ಬ ತನಗೆ ಎಎಸ್‌ಎ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದರೆ, ಆಸ್ಪತ್ರೆ ದಾಖಲೆಗಳ ಪ್ರಕಾರ ಆತ ಹಲ್ಲೆಯಿಂದಾದ ಗಾಯಗಳಿಗೆ ಚಿಕಿತ್ಸೆ ಪಡೆಯಲು ಬಂದಿಲ್ಲ ಬದಲಾಗಿಆತನಿಗೆ ಈ ಹಿಂದೆಯೇ ಇದ್ದ ಆರೋಗ್ಯ ಸಮಸ್ಯೆಯ ಚಿಕಿತ್ಸೆಗಾಗಿ ವೈದ್ಯರನ್ನು ಕಂಡಿದ್ದ.
ಮಹಿಷಾಸುರ
ದುರ್ಗಾ ಮಾತೆಯಿಂದ ಹತನಾದ ರಾಕ್ಷಸ-ಮಹಿಷಾಸುರನ ಬಗೆಗಿನ ಆಚರಣೆ ಜೆಎನ್‌ಯುವಿನಲ್ಲಿ ನಡೆದ ಬಗ್ಗೆ ಉಲ್ಲೇಖಿಸಿದ ಸಚಿವೆ, ಇದನ್ನು ಕೊಲ್ಕತ್ತಾದಲ್ಲಿ ಜನರು ಸಹಿಸುವರೇ ಎಂದು ಪ್ರಶ್ನಿಸಿದ್ದರು.
ಸತ್ಯಾಂಶ :‘‘ರಾಕ್ಷಸ’’ ನನ್ನು ದಕ್ಷಿಣ ಭಾರತದ ಹಲವು ಕಡೆ ಕೊಂಡಾಡಲಾಗುತ್ತದೆ. ಕೆಲವು ವಿದ್ವಾಂಸರಪ್ರಕಾರ ಆತನನ್ನು ಗೌರವರ್ಣದ ದುರ್ಗಾ ಮಾತೆಯ ಎದುರುಕಪ್ಪು ಚರ್ಮದ ವ್ಯಕ್ತಿಯಾಗಿ ಪ್ರಸ್ತುತ ಪಡಿಸುವುದುಆರ್ಯರು ಹಾಗೂ ದ್ರಾವಿಡರ ನಡುವಿನ ವಿಭಜನೆಯನ್ನು ಸೂಚಿಸುತ್ತದೆ. ಕರ್ನಾಟಕದ ಎರಡನೇ ಅತಿ ದೊಡ್ಡ ನಗರ ಬ್ರಿಟಿಷರಿಂದ ಮೈಸೂರ್ ಎಂದು ಕರೆಯಲ್ಪಟ್ಟಿದ್ದು ಇದರ ಮೂಲಹೆಸರು ಮಹಿಷೂರು ಅಂದರೆ ಮಹಿಷಾಸುರನ ಊರು ಎಂಬ ಅರ್ಥವನ್ನು ಕನ್ನಡದಲ್ಲಿ ನೀಡುತ್ತದೆ.
ಪಠ್ಯಪುಸ್ತಕಗಳು
ನರೇಂದ್ರ ಮೋದಿಯವರ ವೈರಿಯೆಂದೇ ಪರಿಗಣಿತರಾದ ಟೀಸ್ಟಾ ಸೇಲ್ವಾಡ್ ಅವರು ಬರೆದ ಆರನೇ ತರಗತಿ ಶಿಕ್ಷಕರ ಗೈಡ್ ಒಂದನ್ನು ಉಲ್ಲೇಖಿಸಿ ‘‘ಪ್ರಾಚೀನ ಭಾರತ ಹಿಂದೂ ಆಗಿತ್ತೆಂದು ಹಾಗೂ ಮಧ್ಯಕಾಲೀನ ಭಾರತವು ಮುಸಲ್ಮಾನವಾಗಿತ್ತೆಂಬ ಸಿದ್ಧಾಂತವನ್ನು ನಾವು ಯಾವತ್ತೂ ತಿಳಿಯಬಾರದು ಎಂದು ಪುಸ್ತಕ ಹೇಳುತ್ತದೆ,’’ಎಂದು ಸಚಿವೆ ಹೇಳಿದರು. ತನ್ನ ವಾದವನ್ನು ಸಮರ್ಥಿಸಲು ಸಚಿವೆ ಇನ್ನೂ ಎರಡು ಪಠ್ಯಪುಸ್ತಕಗಳನ್ನು ಉಲ್ಲೇಖಿಸಿ ಸಮಸ್ಯಾತ್ಮಕ ಶಾಲಾ ಪಠ್ಯ ಕಾಲೇಜು ವಿದ್ಯಾರ್ಥಿಗಳ ಮನಸ್ಸಿನಲ್ಲಿ ‘ದೇಶ-ವಿರೋಧಿ’ ಭಾವನೆ ಮೂಡಿಸುತ್ತದೆಯೆಂದು ಹೇಳಿದರು. ‘‘ನಾವು ಶಿವಾಜಿ ಹಾಗೂಔರಂಗ್‌ಜೇಬ್ ಬಗ್ಗೆ ಕಲಿಸುವಾಗ, ಯಾವ ಶಿವಾಜಿಯನ್ನು ತರಗತಿಗೆ ಕೊಂಡು ಹೋಗಬೇಕೆಂದುತೀರ್ಮಾನಿಸಬೇಕೆಂದು ಪುಸ್ತಕ ಹೇಳುತ್ತದೆ. ನಾವು ಮಕ್ಕಳಿಗೆ 1984ರ ಸಿಕ್ಖ್ ವಿರೋಧಿ ದಂಗೆಗಳು ಹಾಗೂ ಕನ್ಯಾಕುಮಾರಿಯಲ್ಲಿ ನಡೆದ ಹಿಂದೂ-ಕ್ರೈಸ್ತ ಗಲಭೆಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕೆಂದು ಇನ್ನೊಂದು ಪುಸ್ತಕ ಹೇಳುತ್ತದೆ.’’
ಸತ್ಯಾಂಶ :ಭಾರತದ ಸಂಕೀರ್ಣ ಇತಿಹಾಸವನ್ನು ಕಪ್ಪು ಬಿಳುಪಿನಲ್ಲಿ ರೇಖಾತ್ಮಕ ದೃಷ್ಟಿಕೋನದಿಂದ ಪ್ರಸ್ತುತಪಡಿಸುವ ಬದಲು ಸೂಕ್ಷ್ಮ ವ್ಯತ್ಯಾಸಗಳನ್ನು ಪ್ರಸ್ತುತ ಪಡಿಸಿ ಅರಿತುಕೊಳ್ಳಲು ಕಷ್ಟವಾಗುವ ರೀತಿಯಲ್ಲಿ ತಾವು ಉಲ್ಲೇಖಿಸಿದ ವಾಕ್ಯಗಳಿಗೆ ಇರಾನಿಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೇಲಾಗಿ 1984ರ ಗಲಭೆಗಳು ಆಕೆಯ ವಿರೋಧಿಯಾದ ಕಾಂಗ್ರೆಸ್ ಇತಿಹಾಸದಲ್ಲೊಂದು ಕಪ್ಪು ಚುಕ್ಕೆಯಾಗಿದೆ.
ಬುಧವಾರ ರಾತ್ರಿಸೇಟಲ್ವಾಡ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ :‘‘ ಡಾನ್ ಬಾಸ್ಕೋ ಸ್ಕೂಲ್ ಹಾಗೂ ಟೀಚರ್ ಟ್ರೈನಿಂಗ್ ಪುಸ್ತಕಗಳಲ್ಲಿ ಶಿವಾಜಿ ಬಗೆಗಿರುವ ಹೇಳಿಕೆಗಳು ಖ್ಯಾತ ಇತಿಹಾಸಕಾರರಾದ ಜಾದುನಾಥ್ ಸರ್ಕಾರ್ ಹಾಗೂ ಗೋವಿಂದ್ ಸಖಾರಾಂ ಸರ್ದೇಸಾಯಿಯವರ ಕೃತಿಗಳ ಆಧಾರದಿಂದ ಬರೆಯಲಾಗಿದೆ. ಶಿವಾಜಿಯ ಪಟ್ಟಾಭಿಷೇಕಕ್ಕೆ ಜಾತಿ ದೊಡ್ಡ ತಡೆಯಾಗಿತ್ತುಎಂದು ಅದು ಹೇಳಬಯಸಿತ್ತು. ಅಂದ ಹಾಗೆ, ನನ್ನ ವಿರುದ್ಧನಡೆಸಲಾದ ಅಭಿಯಾನವನ್ನು ಶಿವ ಸೇನಾ ಸಂಘಟಿಸಿದ್ದು ಆಗ ರಾಜ್ಯ ಮಾನವ ಹಕ್ಕು ಆಯೋಗ ನನ್ನ ಪರವಾಗಿ ತೀರ್ಪು ನೀಡಿ --ಯಾವುದೇ ವೈರತ್ವವನ್ನು ಸಾಧಿಸಲಾಗಿಲ್ಲ ಹಾಗೂವಾಸ್ತವವಾಗಿ ಇತಿಹಾಸವನ್ನು ವೈಚಾರಿಕ ದೃಷ್ಟಿಕೋನದಿಂದ ಪ್ರಸ್ತುತಪಡಿಸಲಾಗಿತ್ತು--ಎಂದು ಹೇಳಿತ್ತು.’’
ಕ್ರಪೆ : abplive.com