×
Ad

ಚಂಡಮಾರುತ ಪೀಡಿತ ಫಿಜಿಗೆ ಭಾರತದಿಂದ 40ಟನ್ ಔಷಧ ಸಹಾಯ

Update: 2016-02-25 23:38 IST

ಹೊಸದಿಲ್ಲಿ, ಫೆ.25: ಭಾರತವು ಚಂಡಮಾರುತ ಪೀಡಿತ ಫಿಜಿಗೆ ಕನಿಷ್ಠ 40ಟನ್ ಔಷಧ, ಆಹಾರ ಹಾಗೂ ಗುಡಾರಗಳನ್ನು ಭಾರತೀಯ ವಾಯುದಳದ ವಿಮಾನವೊಂದರಲ್ಲಿ ಕಳುಹಿಸಿ ಕೊಡಲಿದೆ.

ಸುಮಾರು 20ಟನ್ ಔಷಧ ಮತ್ತು ಆಹಾರವನ್ನು ದಿಲ್ಲಿಯಿಂದ ಚೆನ್ನೈಗೆ ಸಾಗಿಸಲು ಐಎಎಫ್, ಸಿ17 ವಿಮಾನವೊಂದನ್ನು ಹಾರಿಸಲಿದೆ. ಚೆನ್ನೈಯಲ್ಲಿ 20ಟನ್ ಗುಡಾರಗಳನ್ನು ತುಂಬಿಸಿಕೊಂಡು ಅದು ಫಿಜಿಗೆ ಹೋಗಲಿದೆಯೆಂದು ರಕ್ಷಣಾ ಮೂಲಗಳು ತಿಳಿಸಿವೆ.
ದೇಶದ ಚರಿತ್ರೆಯಲ್ಲೇ ಅತ್ಯಂತ ಪ್ರಬಲ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 44ಕ್ಕೇರಿದ ಕಾರಣ ತನಗೆ ಇನ್ನಷ್ಟು ವಿದೇಶಿ ನೆರವು ಬೇಕಾಗಬಹುದೆಂದು ಚಂಡಮಾರುತದಿಂದ ಸರ್ವನಾಶವಾಗಿರುವ ಫಿಜಿ ಇಂದು ಹೇಳಿದೆ.
ವಾರಾಂತ್ಯದಲ್ಲಿ ‘ವಿನ್‌ಸ್ಟನ್’ ಹೆಸರಿನ ಭಾರೀ ಚಂಡಮಾರುತ ಅಪ್ಪಳಿಸಿದ ಬಳಿಕ ದೇಶದ ಹಲವು ಭಾಗಗಳಲ್ಲಿ ಜನಜೀವನ ಸ್ಥಗಿತಗೊಂಡಿದೆ.
ಶನಿವಾರ ರಾತ್ರಿ ಅಪ್ಪಳಿಸಿದ ಚಂಡಮಾರುತದಿಂದಾಗಿ ಹಲವು ಗ್ರಾಮಗಳು ನಾಶವಾಗಿದ್ದು, ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News