ದುಬೈ:ಸ್ಪಾರ್ಟನ್ ರೇಸ್‌ನಲ್ಲಿ ಸಾವಿರಾರು ಮಂದಿ ಭಾಗಿ
ದುಬೈ: ಜಬಲ್ ಅಲಿ ರೇಸ್‌ಕೋರ್ಸ್‌ನಲ್ಲಿ ನಡೆದ ಸಾಹಸಿಕವಾದ ಸ್ಪಾರ್ನ್ ಓಟದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು . ದುಬೈಯ ಭಾವಿಆಡಳಿತಗಾರ ಶೇಕ್ ಹಂದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್‌ಮಕ್ತೂಂ ಓಟದಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯನ್ನು ನೋಡಲು ಯುಎಇ ಉಪಾಧ್ಯಕ್ಷರೂ ಪ್ರಧಾನಿಯೂ ಆದ ದುಬೈಯ ಆಡಳಿತಾಧಿಕಾರಿ ಶೇಕ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ ಬಂದಿದ್ದರು.
ಕೃತಕವಾಗಿ ರಚಿಸಲಾದ ತಡೆಗಳನ್ನು ಎದುರಿಸಿ ಜನರು ಮುಂದೆ ಸಾಗುವ ರೀತಿಯಲ್ಲಿ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯ ಅಂಗವಾಗಿ ಜನರು ಮರಳಲ್ಲಿ, ಕೆಸರಲ್ಲಿ ಹಾಗೂ ನೀರಿನಲ್ಲಿ ಜನರು ಓಡಬೇಕಾಗಿತ್ತು. ಇದಕ್ಕೆ ಹೊರತಾಗಿ ಭಾರವನ್ನು ಹೊತ್ತು ಓಡುವುದು. ಎತ್ತರವನ್ನು ಹತ್ತಿ ಓಡಬೇಕಾಗಿತ್ತು. ಎಕ್ಸ್ ದುಬೈ ಏರ್ಪಡಿಸುವ ಯುಎಇಯ ಎರಡನೆ ಸ್ಪೋರ್ಟ್ಸ್ ಓಟ ಶುಕ್ರವಾರ ನಡೆದಿದೆ. ಕಳೆದವರ್ಷ ಐದು ಮೀಟರ್ ಟ್ರಾಕ್ ಇದ್ದರೆ ಈಸಲ ಅದನ್ನು ಹದಿಮೂರು ಕಿ.ಮೀ.ಗೆ ಹೆಚ್ಚಿಸಲಾಗಿತ್ತು. ಈಸಲ ಮೂವತ್ತು ತಡೆಗಳನ್ನು ನಿರ್ಮಿಸಲಾಗಿತ್ತು. ಕಳೆದಸಲ ಇಪ್ಪತ್ತು ತಡೆಗಳಿದ್ದವು. ಜೂನಿಯರ್ ಸ್ಪರ್ಧಾಳುಗಳಿಗೆ 1,8ಕಿ.ಮೀ.ಯಲ್ಲಿ 12 ತಡೆಗಳಿದ್ದವು. ಮಹಿಳೆಯರು ಮಕ್ಕಳು ಹಾಗೂ ಗಂಡಸರಿದ್ದ ಐದುಸಾವಿರ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ದುಬೈ ಭಾವಿ ಆಡಳಿತಗಾರ ಶೇಕ್ ಹಂದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ ಹದಿಮೂರು ಕಿ.ಮೀ.ಓಡಿದ್ದಾರೆ. ಕಾರ್ಯಕ್ರಮವನ್ನು ನೋಡಲು ಬಂದಿದ್ದ ಶೇಕ್ ಮುಹಮ್ಮದ್‌ರಿಗೆ ಶೇಕ್ ಮುಹಮ್ಮದ್‌ರು ಸ್ಪರ್ಧೆಯ ಕುರಿತು ವಿವರಿಸಿದರು. ಜನರ ಓಟವನ್ನು ಅವರು ಕುತೂಹಲದಿಂದ ವೀಕ್ಷಿಸಿದರು.