ಜಾಟ್ ಪ್ರತಿಭಟನೆ: ಮಹಿಳೆಯರ ವಿರುದ್ಧ ದೌರ್ಜನ್ಯಕ್ಕೆ ಟ್ರಕ್ ಚಾಲಕರಿಂದ ಸಾಕ್ಷ್ಯ

Update: 2016-02-28 05:06 GMT

ಮುರ್ತಾಲ್: ಫೆ. 22ರಂದು ನಡೆದ ಜಾಟ್ ಪ್ರತಿಭಟನೆಯಲ್ಲಿ ಮಹಿಳೆಯರನ್ನು ಕಾರಿನಿಂದ ಹೊರಗೆಳೆಯುತ್ತಿದ್ದುದನ್ನು ತಾವು ನೋಡಿದ್ದಾಗಿ ಟ್ರಕ್ ಚಾಲಕರು ಶನಿವಾರ ಹೇಳಿದ್ದಾರೆ.

ಆ ದಿನ ರಾತ್ರಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತು ಎಂಬ ವರದಿಗಳ ಬಗ್ಗೆ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್, ಸ್ವಯಂಪ್ರೇರಿತವಾಗಿ ತನಿಖೆ ಆರಂಭಿಸಿದ್ದು, ಫೆ. 29ರೊಳಗೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.


ಮರ್ತಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ, ಹಸನ್‌ಪುರ ಬಳಿ ಮಹಿಳೆಯರನ್ನು ಕಾರಿನಿಂದ ಎಳೆಯುತ್ತಿದ್ದುದನ್ನು ನೋಡಿದ್ದಾಗಿ ಸುಖ್ವಿಂದರ್ ಸಿಂಗ್ ಹೇಳಿದ್ದಾರೆ. ಅವರು ಬೊಬ್ಬೆ ಹಾಕುವುದನ್ನು ಕೇಳಿತು. ಪೊಲೀಸರು ಅಲ್ಲೇ ಪಕ್ಕದಲ್ಲಿದ್ದರು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಸಹವರ್ತಿಯರನ್ನು ನಾವೇ ಹೊಡೆಯಬೇಕೇ ಎಂದು ನಮ್ಮನ್ನೇ ಕೇಳಿದರು. ನಿಮ್ಮ ಬಂದೂಕು ಕೊಡಿ, ಗುಂಡಿಟ್ಟು ಕೊಲ್ಲುತ್ತೇವೆ ಎಂದು ಹೇಳಿದೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News