ಸಲಿಂಗಕಾಮ: ಅಪೌಷ್ಟಿಕತೆ ಮುಖ್ಯ ಕಾರಣ- ಇಂಡೋನೇಷ್ಯಾ ಮೇಯರ್
Update: 2016-02-28 10:42 IST
ಇಂಡೋನೇಷ್ಯಾ: ಮಕ್ಕಳಲ್ಲಿ ಸಲಿಂಗಕಾಮ ಹಾಗೂ ಲಿಂಗಪರಿವರ್ತನೆ ಮನೋಭಾವಕ್ಕೆ ಅಪೌಷ್ಟಿಕತೆ ಮುಖ್ಯ ಕಾರಣ ಎಂದು ಇಂಡೋನೇಷ್ಯಾ ಮೇಯರ್ ಹೇಳಿದ್ದಾರೆ.
ಗರ್ಭಿಣಿಯರಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣವೊಂದರಲ್ಲಿ ತಂಗೆರಂಗ್ ನಗರದ ಆರೋಗ್ಯ ಕಚೇರಿಯಲ್ಲಿ ಮೇಯರ್ ಅರಿಫ್ ಆರ್.ವಿಶ್‌ಮನಸ್ಮಿಯಾ, "ಇಂಡೋನೇಷ್ಯಾ ಮಕ್ಕಳು ಆರೋಗ್ಯಪೂರ್ಣ, ಸಕ್ರಿಯ ಹಾಗೂ ಸ್ಪರ್ಧಾತ್ಮಕತೆ ಬೆಳೆಸಿಕೊಳ್ಳಲು, ಆರಂಭದಿಂದಲೇ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವುದು ಅದರಲ್ಲೂ ಮುಖ್ಯವಾಗಿ ಎದೆಹಾಲು ಉಣಿಸುವುದು ಮುಖ್ಯ" ಎಂದು ವಿವರಿಸಿದರು.
ಇಂಡೋನೇಷ್ಯಾದ ವೆಬ್‌ಸೈಟ್ ಒಕೆಝೋನ್ ವರದಿ ಮಾಡಿರುವಂತೆ, "ಅಲ್ಲಾ ಸೃಷ್ಟಿಸಿರುವುದು ಆಡಂ ಹಾಗೂ ಈವ್ ಅವರನ್ನೇ ಹೊರತು, ಆಡಮ್ ಮತ್ತು ಅಸೆಪ್ ಅವರನ್ನಲ್ಲ" ಎಂದು ಮೇಯರ್ ಹೇಳಿದರು. ಇಂಡೋನೇಷ್ಯಾದಲ್ಲಿ ಸಲಿಂಗಕಾಮ ಕಾನೂನುಬದ್ಧವಾಗಿದ್ದರೂ, ಹಲವರ ಮನೋಭಾವದಲ್ಲಿ ಬದಲಾವಣೆಯಾಗುತ್ತಿದೆ.