ಜಿದ್ದಾದಲ್ಲಿ ಆಗ್ನಿದುರಂತ: ಒಂದೇ ಕುಟುಂಬದ ಐವರ ಮೃತ್ಯು
ಜಿದ್ದಾ: ಬೆಂಕಿಗಾಹುತಿಯಾದ ಹಳೆಯ ಕಟ್ಟಡವೊಂದರಲ್ಲಿ ಒಂದೇ ಕುಟುಂಬದ ಐವರು ಉಸಿರುಕಟ್ಟಿ ಮೃತರಾದ ಘಟನೆ ಜಿದ್ದಾದ ದಕ್ಷಿಣ ಜಾಮಿ ಡಿಸ್ಟ್ರಿಕ್ಟ್‌ನಲ್ಲಿ ನಡೆದಿದೆ.
ತಂದೆತಾಯಿ ಹಾಗೂ ಮೂವರು ಮಕ್ಕಳು ಈ ದುರ್ಘಟನೆಯಲ್ಲಿ ಮೃತರಾಗಿದ್ದು, ಸೋಮಾಲಿಯ ಮೂಲದವರೆಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಒಂಬತ್ತು ಗಂಟೆಗೆ ಕಟ್ಟಡದಲ್ಲಿ ಹೊಗೆ ಏಳುತ್ತಿರುವ ಮಾಹಿತಿ ಸಿಕ್ಕಿದೆ ಎಂದು ಸಿವಿಲ್ ಡಿಫೆನ್ಸ್ ವಕ್ತಾರ ಕರ್ನಲ್ ಸಈದ್ ಸರ್ವಾನ್ ಹೇಳಿದ್ದಾರೆ. ಆ ಕೂಡಲೆ ಘಟನಾ ಸ್ಥಳಕ್ಕೆ ತಲುಪಿದ ಸಿವಿಲ್ ಡಿಫೆನ್ಸ್ ಬೆಂಕಿಯನ್ನು ನಂದಿಸಿ ಜನರನ್ನು ಹೊರತರುವ ಶ್ರಮ ನಡೆಸಿತ್ತು. ಇದರ ನಡುವೆ ಪ್ಲಾಟ್ ಒಂದರಲ್ಲಿ ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಿರುವುದು ಕಂಡು ಬಂದಿತ್ತು.
ಬಾಗಿಲು ಒಳಗೆ ಪ್ರವೇಶಿಸಿದಾಗ ಅದರೊಳಗಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದರೂ ಹೊಗೆಯನ್ನು ಸೇವಿಸಿದ ಪರಿಣಾಮ ಒಳಗಿದ್ದ ಐವರೂ ಮೃತರಾಗಿದ್ದರು. ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ತನಿಖೆ ನಡೆಯುತ್ತಿದೆ.