13 ವರ್ಷದ ಬಾಲಕ ಆತ್ಮಹತ್ಯೆಗೆ ಶರಣು!
ವಿದ್ಯಾನಗರ: ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ ಬಂತೆಂದು ತಂದೆ ತಾಯಿ ಗದರಿಸಿದ್ದಕ್ಕಾಗಿ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಶುಕ್ರವಾರ ರಾತ್ರೆ ಈ ಘಟನೆ ನಡೆದಿದ್ದು ವಿದ್ಯಾನಗರ ಶಾಲೆಯಲ್ಲಿ ಆರನೆ ತರಗತಿಯಲ್ಲಿ ಕಲಿಯುತ್ತಿರುವ ಸತೀಶ್ ಎಂಬ ಮುಗ್ಧ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸತೀಶ್ ಕಾರು ಚಾಲಕ ಕುಮಾರ್ ಮತ್ತು ಕರಿಯಮ್ಮ ದಂಪತಿಗಳ ಪುತ್ರನಾಗಿದ್ದಾನೆ. ಮನೆ ಸಮೀಪದಲ್ಲಿರುವ ಹೊಟೇಲ್‌ಗೆ ದಂಪತಿಗಳು ಕೆಲಸಕ್ಕೆ ಹೋಗುತ್ತಿದ್ದರು. ಎಂಟು ಗಂಟೆಗೆ ಹೋಗಿ 10:30ಕ್ಕೆ ಮರಳಿ ಬರುತ್ತಿದ್ದರು. ಹೀಗೆ ಹೋಗಿ ಅವರು ಮರಳಿ ಬಂದಾಗ ಸತೀಶ್ ಸೀಲಿಂಗ್ ಫ್ಯಾನ್‌ನಲ್ಲಿ ತೂಗಾಡುತ್ತಿದ್ದ.
ಕೂಡಲೇಬಾಲಕನನ್ನು ಸಮೀಪದ ಆಸ್ಪತ್ರೆಗೆ ತಲುಪಿಸಿದರೂ ಆತ ಅಷ್ಟರಲ್ಲೇಮೃತನಾಗಿದ್ದ. ಪರೀಕ್ಷೆಯಲ್ಲಿಅವನಿಗೆ ಕಡಿಮೆ ಮಾರ್ಕ್ ಸಿಕ್ಕಿತ್ತು. ಅವನು ಕಲಿಯುತ್ತಿಲ್ಲ ಎಂದು ಅಧ್ಯಾಪಕರು ಹೇಳಿದ್ದರು. ಆದ್ದರಿಂದ ಕುಮಾರ್ ಮತ್ತು ಕರಿಯಮ್ಮ ಅವನನ್ನು ಗದರಿಸಿದ್ದರು. ಇದರಿಂದ ನೊಂದಬಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.