ಇಂದು ಕನ್ಹಯ್ಯ ಜಾಮೀನು ಅರ್ಜಿ ವಿಚಾರಣೆ

Update: 2016-02-28 18:20 GMT

 ಹೊಸದಿಲ್ಲಿ,ಫೆ.28: ದೇಶದ್ರೋಹದ ಆರೋಪದಲ್ಲಿ ಬಂಧನದಲ್ಲಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಅವರ ಜಾಮೀನು ಅರ್ಜಿಯ ವಿಚಾರಣೆ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸೋಮವಾರ ಪುನರಾರಂಭಗೊಳ್ಳುವ ಸಾಧ್ಯತೆಯಿದೆ.
ಕನ್ಹಯ್ಯರನ್ನು ವಿಚಾರಣೆಗಾಗಿ ಇನ್ನಷ್ಟು ಅವಧಿಗೆ ತನ್ನ ವಶಕ್ಕೆ ನೀಡುವಂತೆ ಕೋರುವುದಾಗಿ ಫೆ.24ರಂದು ದಿಲ್ಲಿ ಪೊಲೀಸರು ನಿವೇದಿಸಿಕೊಂಡ ಬಳಿಕ ನ್ಯಾ.ಪ್ರತಿಭಾ ರಾಣಿ ಅವರು ವಿಚಾರಣೆಯನ್ನು ಫೆ.29ಕ್ಕೆ ಮುಂದೂಡಿದ್ದರು.
  ಪೊಲೀಸರು ತಾವು ನಡೆಸುತ್ತಿರುವ ತನಿಖೆಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿಗಳನ್ನು ನೀಡುವ ಸಾಧ್ಯತೆಯಿರುವುದರಿಂದ ಸೋಮವಾರದ ವಿಚಾರಣೆಯು ಮಹತ್ವವನ್ನು ಪಡೆದುಕೊಂಡಿದೆ. ಒಂದು ದಿನದ ಮಟ್ಟಿಗೆ ಕನ್ಹಯ್ಯಿರನ್ನು ತಮ್ಮ ವಶಕ್ಕೆ ಪಡೆದಿದ್ದ ಪೊಲೀಸರು ಅವರನ್ನು ಬಂಧನದಲ್ಲಿರುವ ಇತರ ಇಬ್ಬರು ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಅನಿರ್ಬಾಣ ಭಟ್ಟಾಚಾರ್ಯ ಅವರೊಂದಿಗೆ ಮುಖಾಮುಖಿ ಭೇಟಿ ಮಾಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News