×
Ad

ವರದಕ್ಷಿಣೆ ಕಿರುಕುಳ : ಪತಿ ಮತ್ತು ಅತ್ತೆಯ ವಿರುದ್ಧ ಕೇಸು ಜಡಿದ ಕರೀಷ್ಮಾ ಕಪೂರ್

Update: 2016-02-28 21:07 IST

 ಮುಂಬೈ: ಮುಂಬೈ ಕಾರ್ ಪೊಲೀಸರಿಗೆ ಕರೀಷ್ಮಾ ಕಪೂರ್ ತನ್ನ ಗಂಡ ಹಾಗೂ ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ದೂರನ್ನು ನೀಡಿದ್ದಾರೆ. ಒಂದು ವಾರಗಳಿಂದೀಚೆಗೆ ನಡೆಯುತ್ತಿರುವ ವಿವಾಹ ವಿಚ್ಛೇದನ ಕಲಹಗಳ ನಡುವೆ ಹೊಸ ಆರೋಪಗಳೊಂದಿಗೆ ಕರೀಷ್ಮಾ ಕಪೂರ್ ಪ್ರತ್ಯಕ್ಷರಾಗಿದ್ದಾರೆ. ಪತಿ ಸಂಜಯ್ ಹಾಗೂ ಅತ್ತೆ ರಾಣಿ ಸುರೀಂದರ್ ಕಪೂರ್ ವಿರುದ್ಧ ಬಾಲಿವುಡ್ ತಾರೆ ಈ ಆರೋಪವನ್ನು ಹೊರಿಸಿದ್ದು ವಿವಾದ ತಾರಕಕ್ಕೇರಿದೆ. ಕರೀಶ್ಮಾರ ದೂರು ಸ್ವೀಕರಿಸಿರುವ ಪೊಲೀಸರು ಕರೀಷ್ಮಾರನ್ನು ಕರೆಯಿಸಿಕೊಂಡು ಸಾಕ್ಷ್ಯವನ್ನು ದಾಖಲಿಸಿಕೊಂಡಿದ್ದು ಸೆಕ್ಷನ್ 498(ಎ), ಸೆಕ್ಷನ್ 34 ಪ್ರಕಾರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

 ಉದ್ಯಮಿ ಸಂಜಯ್ ಕಪೂರ್ ಪತ್ನಿ ಕರೀಷ್ಮಾರ ವಿರುದ್ಧ ಗಂಭೀರ ಆರೋಪವನ್ನು ಹೊರಿಸಿ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ಕರೀಶ್ಮಾ ತನ್ನನ್ನು ಹಣಕ್ಕಾಗಿ ವಿವಾಹ ಮಾಡಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್‌ರೊಂದಿಗಿನ ಪ್ರೇಮ ವಿಫಲವಾದ ನಂತರ ತನ್ನನ್ನು ಆಯ್ಕೆ ಮಾಡಿಕೊಂಡಿದ್ದರೆಂದು ಆರೋಪಿಸಿದ್ದರು. ಪತ್ನಿ ಹಾಗೂ ಮಕ್ಕಳಿಗೆ ಅಮ್ಮ ಎಂಬ ನೆಲೆಯಲ್ಲಿ ಕರೀಶ್ಮಾ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಂಜಯ್ ಕುಟುಂಬ ನ್ಯಾಯಾಲಯದಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News