ಭಾರತ- ಅಮೆರಿಕಾ: ಮಂಗಳನಲ್ಲಿ ಜಂಟಿ ಬಾಹ್ಯಾಕಾಶ ಸಂಶೋಧನೆ
Update: 2016-02-29 13:23 IST
ಅಮೆರಿಕ,ಫೆ.29: ಮಂಗಳನಲ್ಲಿ ಜಂಟಿ ಬಾಹ್ಯಾಕಾಶ ಸಂಶೋಧನೆಗಾಗಿ ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೊವನ್ನು ಆಹ್ವಾನಿಸಲಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿಕೊಂಡಿದೆ. ರೋಬಾಟಿಕ್ ಸಂಶೋಧನೆ ನಡೆಸಲಿಕ್ಕೆ ಭಾರತವನ್ನು ಆಹ್ವಾನಿಸಲಾಗಿದೆಯೆಂದು ನಾಸಾದ ಜೆಟ್ ಪ್ರೋಫಲ್ಶನ್ ಲೆಬೊರೇಟರಿ ಮುಖ್ಯಸ್ಥರಾದ ಚಾರ್ಲ್ಸ್ ಇಲಾಚಿಯಾನ್ ತಿಳಿಸಿದ್ದಾರೆ. ಭಾರತಕ್ಕೂ ಅಮೆರಿಕಕ್ಕೂ ಜಂಟಿಯಾಗಿ ಸಂಶೋಧನೆ ನಡೆಸಲು ಸಾಧ್ಯವಿದೆ.
ಭಾರತವಲ್ಲದೆ ಯುರೋಪಿಯನ್ ಸ್ಪೇಸ್ ಎಜೆನ್ಸಿ ಕೂಡಾ ಯೋಜನೆಯ ಪಾಲುದಾರನಾಗಲಿದೆ. ಭಾರತದ ಅಭಿಮಾನವಾದ ಮಂಗಲಯಾನ ಯೋಜನೆ ಭಾರೀ ಯಶಸ್ವಿಯಾಗಿದೆ. ಇದು ಸಹಕಾರ ನೀಡಲಿಕ್ಕಾಗಿ ಇಸ್ರೊವನ್ನು ಆಹ್ವಾನಿಸಲು ನಾಸಾಕ್ಕೆ ಪ್ರೇರಣೆ ನೀಡಿದೆ. ಭಾರತ ಈ ಯೋಜನೆಯಲ್ಲಿ ಸಹಕರಿಸಲಿದೆ ಎಂದು ಇಲಾಚಿಯಾನ್ ಆಶಾವಾದ ವ್ಯಕ್ತಪಡಿಸಿದ್ದಾರೆ.