×
Ad

ಮೆಕ್ಸಿಕೊದಲ್ಲಿ ಬಸ್ ಉರುಳಿ 10 ಮಂದಿ ಸಾವು: 26 ಮಂದಿಗೆ ಗಾಯ

Update: 2016-02-29 17:01 IST

ಮೆಕ್ಸಿಕೊ ಸಿಟಿ, ಫೆ. 29: ಮೆಕ್ಸಿಕೊದಲ್ಲಿ ಬಸ್ಸೊಂದು ಬೆಟ್ಟದಾರಿಯಲ್ಲಿ 45 ಮೀಟರ್ ಆಳದ ಗುಂಡಿಗೆ ಬಿದ್ದಿದ್ದು ಇಬ್ಬರು ಮಕ್ಕಳ ಸಹಿತ ಹತ್ತು ಮಂದಿ ಮೃತರಾಗಿದ್ದಾರೆ.ಬಸ್‌ನಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದು ಮೂವರನ್ನು ಹೊರತುಪಡಿಸಿ ಉಳಿದೆಲ್ಲರೂ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿರಂಗ್‌ನ ನಾಗರಿಕ ಸುರಕ್ಷಾಧಿಕಾರಿ ಅಲೊನ್ಸೊ ಗೋಮೆರ್ ಪಲಾಸಿಯೊ ಘಟನೆ ಕುರಿತು ವಿವರಿಸುತ್ತಾ ಬಸ್ ಯಾವುದೋ ಪ್ರವಾಸಿ ಸ್ಥಳದಿಂದ ಮರಳುತ್ತಿತ್ತು. ಬಸ್‌ನ ಬ್ರೇಕ್ ಕೆಟ್ಟಿದ್ದರಿಂದ ಭಾರೀ ಹೊಂಡಕ್ಕೆ ಬಸ್ ಉರುಳಲು ಕಾರಣವಾಗಿತ್ತೆಂದು ಚಾಲಕ ತಿಳಿಸಿರುವುದಾಗಿ ಅವರು ಹೇಳಿದ್ದಾರೆ. ಚಾಲಕನೂ ಗಾಯಗೊಂಡಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ದುರಂತಕ್ಕೆ ಕಾರಣವೇನೆಂದು ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News