ಮುಸ್ಲಿಮರು ರಾಕ್ಷಸರಾಗಿದ್ದಾರೆ: ಅವರು ರಾವಣನ ಅವತಾರವಾಗಿದ್ದಾರೆ; ಇಸ್ಲಾಮ್‌ನ ವಿರುದ್ಧ ಯುದ್ಧಕ್ಕೆ ಸಮಯವಾಯಿತು!
ಲಕ್ನೊ,ಫೆ.29: ಮುಸ್ಲಿಮರು ರಾಕ್ಷಸರಾಗಿದ್ದಾರೆ. ರಾವಣನ ತಲೆಮಾರು ಆಗಿದ್ದಾರೆ. ಅಂತಿಮ ಯುದ್ಧಕ್ಕೆ ಸಮಯವಾಯಿತು ಈ ರೀತಿ ಸಂಘಪರಿವಾರದ ಸಭೆಯೊಂದರಲ್ಲಿ ಆಕ್ರೋಶವ್ಯಕ್ತವಾಗಿದೆ. ಆಗ್ರಾದ ಕತಾರಿಯದಲ್ಲಿ ಕೊಲ್ಲಲ್ಪಟ್ಟ ವಿಶ್ವಹಿಂದೂ ಪರಿಷತ್ ಕಾರ್ಯಕರ್ತ ಅರುಣ್ ಮಾಹುರ ಸ್ಮರಣಾರ್ಥವಾಗಿ ನಡೆದ ಸಮಾರಂಭದಲ್ಲಿ ಸಂಘಪರಿವಾರದ ನಾಯಕರು ಈರೀತಿ ಕಟು ಭಾಷೆಯ ವಿದ್ವೇಷಕಾರಿ ಭಾಷಣವನ್ನು ಮಾಡಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಹ ಸಚಿವ ಮತ್ತು ಆಗ್ರ ಸಂಸತ್ಸದಸ್ಯ ರಾಮ್ ಶಂಕರ್ ಕಟಾರಿಯ, ಫತೇಪುರ್ ಸಿಕ್ರಿ ಸಂಸತ್ಸದಸ್ಯ ಬಾಬುಲಾಲ್ ಸಹಿತ ಹಿರಿಯ ನಾಯಕರ ಸಮ್ಮುಖದಲ್ಲಿ ಈ ರೀತಿ ಪ್ರಚೋದಕ ಭಾಷಣ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಮಾಡಿದೆ.
ಸಭೆಯಲ್ಲಿ ಭಾಷಣ ಮಾಡಿದವರೆಲ್ಲರೂ ಮುಸ್ಲಿಮರ ವಿರುದ್ಧ ಯುದ್ಧವನ್ನು ಘೋಷಿಸಿದ್ದಾರೆ. ಮುಸ್ಲಿಮರ ನಿರ್ಮೂಲಕ್ಕೆ ಎಲ್ಲ ಸಿದ್ಧತೆಗಳು ಪೂರ್ತಿಯಾಗಿದೆಯೆಂದು ಭಾಷಣದಲ್ಲಿ ಎಚ್ಚರಿಕೆ ನೀಡಲಾಗಿದೆ.ಮಾಹುರ ಮರಣಾನಂತರದ ವಿಧಿವಿಧಾನಗಳು ಮುಗಿಯುವ ಮುಂಚೆಯೇ ಶತ್ರುಗಳ ವಿರುದ್ಧ ಪ್ರತಿಕಾರ ಮಾಡಲಾಗುವುದು ಎಂದು ಸಭೆಯಲ್ಲಿ ಘೋಷಿಸಲಾಯಿತು. ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ಅಶೋಕ್ ಲವಾನಿಯ ಮಾಹುರ ಸಾವಿಗೆ ತಕ್ಕ ಪ್ರತಿಕಾರ ವೆಸಗಲಾಗುವುದೆಂದು ಗರ್ಜಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯನ್ನು ಆಯುಧಗಳಿಂದ ಎದುರಿಸಲಾಗುವುದುಎಂದು ಬಿಜೆಪಿ ಶಾಸಕ ಜಗನ್ ಪ್ರಸಾದ್ ಗಾರ್ಗ್ ಹೇಳಿದ್ದಾರೆ. ನಾಯಕರು ಹರಿತವಾದ ಕತ್ತಿಯನ್ನು ತೆಗೆದುಕೊಳ್ಳಿರಿ. 2017ರಲ್ಲಿ ಚುನಾವಣೆ ಬರುತ್ತಿದೆ. ನಮ್ಮ ಸಾಮರ್ಥ್ಯವನ್ನು ಆಯುಧಗ ಮೂಲಕ ತೋರಿಸಬೇಕಾಗಿದೆ ಎಂದು ಶಾಸಕ ಘೋಷಿಸಿದ್ದಾರೆ.
ಭಾರೀ ಭದ್ರತೆಯಲ್ಲಿ ನಡೆದ ಸಭೆಯಲ್ಲಿ ವಿಹಿಂಪ ಕಾರ್ಯದರ್ಶಿ ಸುರೇಂದ್ರ ಜೈನ್, ಬಜರಂಗದಳದ ನಾಯಕರೂ ಕೂಡಾ ಈ ಸಭೆಯಲ್ಲಿ ಭಾಗವಹಿಸಿದ್ದರು. ಮುಝಪ್ಫರ್ ನಗರದ ದಂಗೆ ನೆನಪಿಲ್ಲವೇ ಎಂದು ಸುರೇಂದ್ರ ಜೈನ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ್ರಾವನ್ನು ಮುಝಪ್ಫರ್ ನಗರ್‌ಆಗಿ ಪರಿವರ್ತಿಸ ಬೇಡಿ ಎಂದೂ ಅವರು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದರು. ಸಚಿವ ಕಟಾರಿಯ ಕೂಡ ಸುಮ್ಮನುಳಿಯಲಿಲ್ಲ. ಪ್ರಾರ್ಥನೆ ಮುಗಿಸಿ ಬರುವಾಗ ಒಬ್ಬ ಕೊಲ್ಲಲ್ಪಡುವುದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದ ಅವರು ಇದನ್ನು ಪ್ರತಿರೋಧಿಸದಿದ್ದರೆ ಮಾಹುರನ್ನು ಕಳಕೊಂಡಂತೆ ನಾಳೆ ಇತರರನ್ನು ಕೂಡ ಕಳಕೊಳ್ಳಬೇಕಾದೀತು. ನಾವು ಬೇರೊಬ್ಬನನ್ನು ಕಳಕೊಳ್ಳುವ ಮೊದಲು ಸ್ವಯಂ ಶಕ್ತಿತುಂಬಿಕೊಂಡು ಅದು ಎಷ್ಟು ಆಳವಾಗಿದೆ ಎಂಬುದನ್ನು ಶತ್ರುಗಳಿಗೆ ತೋರಿಸಿಕೊಡಬೇಕಾಗಿದೆಯೆಂದು ಕಟಾರಿಯ ಗುಡುಗಿದ್ದಾರೆ. ಮಾಹುರ ಕೊಲೆಪಾತಕಿಗಳನ್ನು ಗಲ್ಲಿಗೇರಿಸಬೇಕಾಗಿದೆ ಎಂದೂ ಅವರು ಹೇಳಿದ್ದು ತಾನು ಮಂತ್ರಿಯಾಗಿದ್ದೇನೆಂದು ತನ್ನ ಕೈಗಳನ್ನು ಯಾರು ಕಟ್ಟಿಹಾಕಿಲ್ಲವೆಂದುಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.