ಫಾಸ್ಟರ್‌ಗೆ ಗುಂಡಿಟ್ಟು ಕೊಂದ ಸಹೋದರ!
ಓಹಿಯೊ,ಫೆ.29: ಓಹಿಯೊದ ಡೆಡನ್‌ನ ಸೇಂಟ್ ಪೀಟರ್ಸ್ ಮಿಷನರಿ ಬ್ಯಾಪಿಸ್ಟ್‌ನ ಪ್ರಾರ್ಥನೆಯ ವೇಳೆ ಪಾಸ್ಟರ್ ವಿಲಿಯಂ ಸ್ಕೂಲರ್ (70 ವರ್ಷ) ತನ್ನ ಸಹೋದರನಿಂದ ಗುಂಡೇಟಿಗೀಡಾಗಿ ಮೃತರಾಗಿದ್ದಾರೆ. ಚರ್ಚ್‌ನಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಭಕ್ತರ ನಡುವೆ ಪಾಸ್ಟರ್ ವಿಲಿಯಂ ಸ್ಕೂಡನ್‌ರನ್ನು ಅವರ ತಮ್ಮ ಡ್ಯಾನಿಯಲ್(69ವರ್ಷ) ಗುಂಡಿಟ್ಟು ಸಾಯಿಸಿದ್ದಾರೆ. ಕಣ್ಣುಮುಚ್ಚಿ ನಡೆಸುವ ಪ್ರಾರ್ಥನಾ ವಿಧಿವೇಳೆ ಅನಿರೀಕ್ಷಿತವಾಗಿ ಅವರಿಗೆ ಗುಂಡೇಟು ಬಿದ್ದಿತ್ತು. ತಕ್ಷಣ ಕುಸಿದು ಬಿದ್ದ ಅವರು ಚಡ ಪಡಿಸಿ ಮೃತರಾದರು. ಫಾಸ್ಟರ್‌ಗೆ ಬಂದೆರಗಿದ ದುರ್ಗತಿಯನ್ನು ನೋಡಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಭಕ್ತರು ಒಂದು ನಿಮಿಷ ಸ್ತಂಭೀಭೂತರಾಗಿದ್ದರು.
ಕೆಲವರು ಬದುಕಿದೆಯಾ ಬಡಜೀವವೇ ಎಂದು ಚರ್ಚ್‌ನಿಂದ ಎದ್ದು ಬಿದ್ದು ಓಡಿಹೋಗಿದ್ದರು. ಪ್ರಾರ್ಥನೆ ಹಾಡುತಿದ್ದ ವೇಳೆ ಎರಡು ಗುಂಡುಗಳು ಬಂದು ಅವರನ್ನು ತಗಲಿತ್ತು. ಆನಂತರ ಫಾಸ್ಟರ್ ನೆಲಕ್ಕುರುಳುವುದು ಕಾಣಿಸಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ವಿವರಿಸಿದ್ದಾರೆ.
ಗುಂಡೇಟಿಗೀಡಾಗಿ ಫಾಸ್ಟರ್ ಸ್ಥಳದಲ್ಲಿಯೇ ಮೃತರಾಗಿದ್ದರು. ಆ ವೇಳೆ ಅಲ್ಲಿ ಇಪ್ಪತ್ತು ಮಂದಿ ಇದ್ದರೆಂದೂ ತಿಳಿಸಿರುವ ಪೊಲೀಸರು ಕೊಲೆಗೈದ ಅವರ ಸಹೋದರ ಡ್ಯಾನಿಯಲ್‌ನನ್ನು ಬಂಧಿಸಿದ್ದಾರೆ. ಕೊಲೆಕೃತ್ಯಕ್ಕೆ ಕಾರಣವೇನೆಂದು ಸದ್ಯ ಸ್ಪಷ್ಟವಾಗಿ ಗೊತ್ತಾಗಿಲ್ಲ. ಆದರೆ ಕುಟುಂಬ ಕಲಹ ಫಾಸ್ಟರ್ ಹತ್ಯೆಗೆ ಕಾರಣವೆಂದು ಹೇಳಲಾಗಿದೆ. ಪೊಲೀಸಧಿಕಾರಿಗಳು ಇನ್ನೂ ಈ ಕುರಿತು ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ. ಸಣ್ಣ ಚರ್ಚ್‌ವೊಂದರಲ್ಲಿ ಸ್ಕೂಲರ್ 2011ರಲ್ಲಿ ಫಾಸ್ಟರಾಗಿ ಕಾರ್ಯವೆಸಗಲಾರಂಭಿಸಿದ್ದರು. ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಿದ್ದ ಇವರಿಗೆ ಕಂಚಿನ ಪದಕ ದೊರೆಕಿತ್ತು.
1972ರಲ್ಲಿ ಸೆಂಟ್ರಲ್ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ, 1076ರಲ್ಲಿ ಓಹಿಯಾ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಸ್ಕೂಲರ್ ವ್ಯಾಸಂಗ ಮಾಡಿದ್ದರು.ಮೌಂಟನ್ ಗಾಮರಿ ಕೌಂಟಿ ಫ್ಯಾಮಿಲಿ ಚಿಲ್ಡ್ರನ್ ಸಮಿತಿಯ ಸದಸ್ಯರಾಗಿದ್ದಾರೆ. ಡೆಡನ್‌ನ ಬ್ಯಾಪಿಸ್ಟ್ ಮಿನಿಸ್ಟರ್ಸ್ ಯೂನಿಯನ್ ಅಧ್ಯಕ್ಷರಾಗಿದ್ದಾರೆ. ಮತ್ತು ಅವರು ತನ್ನ ಸಮುದಾಯದಲ್ಲಿ ಹೆಚ್ಚಿನ ಗೌರವವಿದ್ದ ನಾಯಕನಾಗಿರುವುದು ಡೆಡೆನ್‌ನಲ್ಲಿ ಅವರ ಅಂತ್ಯ ಅತೀವ ದುಃಖಕ್ಕೆ ಕಾರಣವಾಗಿದೆ.