ಸೋಮಾಲಿಯದಲ್ಲಿ ಬಾಂಬ್ ಸ್ಫೋಟ: 30ಮಂದಿ ಸಾವು, ಐವತ್ತು ಮಂದಿಗೆ ಗಾಯ
ಮೊಗದಿಶು, ಫೆ.29: ಆಫ್ರಿಕನ್ ರಾಷ್ಟ್ರವಾದ ಸೋಮಾಲಿಂದ ಬೆದಾವೊ ನಗರದಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಇಂದು ಮೂವತ್ತು ಮಂದಿ ಮೃತರಾಗಿದ್ದು ಐವತ್ತು ಮಂದಿ ಗಾಯಗೊಂಡಿದ್ದಾರೆ. ಪೊಲೀಸಧಿಕಾರಿ ಅಬ್ದಿ ಉಸ್ಮಾನ್‌ರು ಈ ವಿಷಯವನ್ನು ತಿಳಿಸುತ್ತಾ ಬೆದಾವೊ ಪಟ್ಟಣದಲ್ಲಿ ರೈಲ್ವೆ ಜಂಕ್ಷನ್‌ವೊಂದರಲ್ಲಿ ಮತ್ತು ಇನ್ನೊಂದೆಡೆ ನಡೆದ ಎರಡು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ ಮೂವತ್ತು ಮಂದಿ ಮೃತರಾಗಿದ್ದಾರೆಂದು ತಿಳಿಸಿದ್ದಾರೆ.
ರೈಲ್ವೆ ಜಂಕ್ಷನ್ ಸಮೀಪ ಆತ್ಮಾಹುತಿ ಕಾರ್‌ಬಾಂಬ್ ಸ್ಫೋಟ ನಡೆದಿದ್ದರೆ, ರೆಸ್ಟೋರೆಂಟ್‌ನಲ್ಲಿ ಕೂಡ ಬಾಂಬ್ ಇರಿಸಲಾಗಿತ್ತು. ಸ್ಫೋಟದ ಹೊಣೆಯನ್ನು ಭಯೋತ್ಪಾದಕ ಸಂಘಟನೆಯಾದ ಅಲ್ ಶಬಾಬ್ ವಹಿಸಿಕೊಂಡಿದೆ. ಅದರ ವಕ್ತಾರ ಶೇಖ್ ಅಬ್ದಿಯಾಸಿಸ್ ಅಬೂ ಮುಸಾಬ್"ನಮ್ಮ ಗುರಿಯಲ್ಲಿ ಸರಕಾರಿ ಅಧಿಕಾರಿಗಳು ಮತ್ತು ಸೈನಿಕರಿದ್ದರು"ಎಂದು ತಿಳಿಸಿದ್ದಾನೆ. ಇದಕ್ಕೆಮೊದಲು ಶುಕ್ರವಾರ ಕೂಡಾ ರಾಜಧಾನಿ ಮೊಗದಿಶುವಿನಲ್ಲಿ ಪಾರ್ಕೊಂದರ ಸಮೀಪ ಕಾರ್‌ಬಾಂಬ್ ಸ್ಫೋಟಿಸಿ ಹದಿನಾಲ್ಕು ಮಂದಿ ಮೃತರಾಗಿದ್ದರು.