ಸಿಬಿಐಗೆ ಹಣಬಲ
Update: 2016-02-29 23:56 IST
ಹೊಸದಿಲ್ಲಿ,ಫೆ.29: ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿರುವ ಸಿಬಿಐಗೆ ಸೋಮವಾರ ಜೇಟ್ಲಿಯವರು ಮಂಡಿಸಿರುವ ಮುಂಗಡಪತ್ರವು ನೆಮ್ಮದಿಯನ್ನು ಕಲ್ಪಿಸಿದೆ. ಮುಂದಿನ ಹಣಕಾಸು ವರ್ಷಕ್ಕೆ ಸಿಬಿಐಗೆ ಸುಮಾರು 727.75 ಕೋ.ರೂ. ಒದಗಿಸಲಾಗಿದ್ದು, ಇದು 2015-16ನೆ ಸಾಲಿನ ಪರಿಷ್ಕೃತ ಅಂದಾಜು 550.08 ಕೋ.ರೂ.ಗೆ ಹೋಲಿಸಿದರೆ ಶೇ.32ರಷ್ಟು ಏರಿಕೆಯಾಗಿದೆ.
ಹಲವಾರು ರಾಜ್ಯಗಳಲ್ಲಿ ಚಿಟ್‌ಫಂಡ್ ಮತ್ತು ವ್ಯಾಪಂ ಹಗರಣಗಳಂತಹ ಹಲವಾರು ಹಣಕಾಸು ಅಪರಾಧ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐಗೆ ತನ್ನ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಣಕಾಸಿನ ಅಗತ್ಯವಿದೆ ಎಂದು ಮೂಲಗಳು ತಿಳಿಸಿದವು.