ದೇಶದಲ್ಲಿ ಫ್ಯಾಶಿಸಂನ ಆವೃತ್ತಿ ಆರಂಭ: ಜಿ.ರಾಜಶೇಖರ್ ಆತಂಕ

Update: 2016-02-29 18:43 GMT

ಉಡುಪಿ, ಫೆ.29: 1975ರ ತುರ್ತು ಪರಿಸ್ಥಿತಿಯಲ್ಲಿ ಪ್ರಭುತ್ವ ಮಾತ್ರ ಭಾಗಿಯಾಗಿತ್ತು. ಆದರೆ ಇಂದಿನ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಪ್ರಭುತ್ವದ ಜೊತೆ ಸಂಘಪರಿವಾರ, ಎಬಿವಿಪಿಯಂಥ ಸಂಘ ಟನೆಗಳು ಸೇರಿಕೊಂಡಿವೆ. ಇದು ಕೇವಲ ತುರ್ತು ಪರಿಸ್ಥಿತಿಯಲ್ಲ, ಫ್ಯಾಶಿಸಂನ ಭಾರತ ಆವೃತ್ತಿಯ ಆರಂಭ. ಈ ಅಪಾಯವನ್ನು ನಾವು ಗುರುತಿಸ ಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.
ಹೊಸದಿಲ್ಲಿಯ ಜೆಎನ್‌ಯು ಹಾಗೂ ದೇಶದ ವಿವಿಧ ವಿವಿಗಳಲ್ಲಿರುವ ವಿದ್ಯಾರ್ಥಿಗಳ ಸ್ವಾತಂತ್ರ್ಯದ ರಕ್ಷಣೆಗಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಸಹ ಕಾರದೊಂದಿಗೆ ಉಡುಪಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟವು ಸೋಮವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಕ್ಲಾಕ್ ಟವರ್ ಎದುರು ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ನಕಲಿ ಟ್ವೀಟ್‌ಗಳನ್ನು ಆಧರಿಸಿ ಉಮರ್ ಖಾಲಿದ್‌ಗೆ ಎಲ್‌ಇಟಿ ನಂಟು ಇದೆ ಎಂಬ ಹೇಳಿಕೆ ನೀಡುವ ರಾಜನಾಥ್ ಸಿಂಗ್ ಕೇಂದ್ರ ಗೃಹಸಚಿವರಾಗಲು ನಾಲಾಯಕು. ಅದೇ ರೀತಿ ವೇಮುಲಾ ಬಗ್ಗೆ ಸಚಿವೆ ಸ್ಮತಿ ಇರಾನಿ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಬಂಧಿತರಾಗಿರುವ ಜೆಎನ್‌ಯು ವಿದ್ಯಾರ್ಥಿಗಳು ತಾವು ದೇಶದ್ರೋಹಿಗಳಲ್ಲ ಎಂಬು ದನ್ನು ಸಾಬೀತು ಪಡಿಸುವಂತೆ ದಿಲ್ಲಿ ಪೊಲೀಸ್ ಮುಖ್ಯಸ್ಥ ಹೇಳಿಕೆ ನೀಡುತ್ತಿದ್ದಾರೆ. ಇವೆಲ್ಲವೂ ದೇಶದಲ್ಲಿ ಪ್ರಜಾ ಪ್ರಭುತ್ವ ಕೊನೆಯ ಕಾಲವನ್ನು ಎದುರಿಸುತ್ತಿದೆ ಎಂಬುದನ್ನು ತೋರಿಸು ತ್ತಿದೆ. ನಾವು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಬದುಕು ತ್ತಿದ್ದೇವೆ ಎಂದರು.
ಹಿರಿಯ ಚಿಂತಕ ಕೆ.ಫಣಿರಾಜ್ ಮಾತನಾಡಿ, ಬ್ರಿಟಿಷರು ಭಾರತೀಯ ಸ್ವಾತಂತ್ರ ಹೋರಾಟಗಾ ರರನ್ನು ಬಗ್ಗು ಬಡಿಸಲು ಹಾಕುತ್ತಿದ್ದ 124ಎ ದೇಶ ದ್ರೋಹದ ಕೇಸುಗಳನ್ನು ಇಂದಿನ ಕೇಂದ್ರ ಸರಕಾರ, ವಿವಿಗಳ ವಿದ್ಯಾರ್ಥಿಗಳ ಮೇಲೆ ಹಾಕುತ್ತಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ವಿದ್ಯಾರ್ಥಿಗಳ ಮೇಲೆ ಇಂತಹ ಕೇಸು ಹಾಕುತ್ತಿರಲಿಲ್ಲ. ಇದು ದೇಶದಲ್ಲೇ ಪ್ರಥಮ ಎಂದು ಕಟುವಾಗಿ ಟೀಕಿಸಿದರು.
ಒಕ್ಕೂಟದ ಸಹಸಂಚಾಲಕ ಅಕ್ಷಯ ವಡೇರ ಹೋಬಳಿ, ಎಸ್‌ಐಒ ಜಿಲ್ಲಾಧ್ಯಕ್ಷ ಯಾಸೀನ್ ಕೋಡಿ ಬೆಂಗ್ರೆ, ಸಿಎಫ್‌ಐ ಮುಖಂಡ ಇರ್ಷಾದ್, ಬಹುಜನ ವಿದ್ಯಾರ್ಥಿ ಸಂಘದ ಸುರೇಶ್ ಮಾತನಾಡಿದರು. ಲೇಖಕಿ ಜ್ಯೋತಿ ಗುರುಪ್ರಸಾದ್, ರೆ.ಫಾ.ವಿಲಿಯಂ ಮಾರ್ಟಿಸ್, ವಿವಿಧ ಸಂಘಟನೆಗಳ ಪ್ರಮುಖರಾದ ಸಿರಿಲ್ ಮಥಾಯಸ್, ಜಯನ್ ಮಲ್ಪೆ, ದಿನಕರ ಬೆಂಗ್ರೆ, ಇದ್ರೀಸ್ ಹೂಡೆ, ಲೂವಿಸ್ ಲೋಬೊ, ಹಯವದನ ಉಪಾಧ್ಯಾಯ, ಮುಹಮ್ಮದ್ ಮರಕಡ, ಕವಿರಾಜ್, ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಉಡುಪಿಯ ಜೋಡುಕಟ್ಟೆ ಯಿಂದ ಸರ್ವಿಸ್ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ದೇಶದ ಸಂವಿಧಾನದ ಬದಲು ಮನುಸ್ಮತಿಯನ್ನು ಜಾರಿಗೆ ತರುವ ಹುನ್ನಾರ ನಡೆಯುತ್ತಿದ್ದು, ಸಂವಿ ಧಾನ ರಕ್ಷಣೆಗೆ ನಾವೆಲ್ಲ ಧ್ವನಿ ಎತ್ತಬೇಕಾಗಿದೆ.
       -ಸುರೇಶ್, ಬಹುಜನ ವಿದ್ಯಾರ್ಥಿ ಸಂಘ

ಜಾತಿವಾದಿಗಳು, ಕೋಮುವಾದಿಗಳು ವಿವಿಗ ಳನ್ನು ತಮ್ಮ ಮೈದಾನದಂತೆ ಬಳಸಿಕೊಳ್ಳುತ್ತಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಹಕ್ಕುಗಳನ್ನು ದಮನಿಸುವ ಕಾರ್ಯ ನಡೆಯುತ್ತಿದೆ.
             -ಇರ್ಷಾದ್ ಅಹ್ಮದ್, ಸಿಎಫ್‌ಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News