×
Ad

ಇರಾಕ್ ಸೇನಾ ಕಾರ್ಯಾಲಯದ ಮೇಲೆ ಐಸಿಸ್ ಆತ್ಮಹತ್ಯಾ ದಾಳಿ

Update: 2016-03-01 23:27 IST

ಬಾಗ್ದಾದ್, ಮಾ.1: ಇರಾಕ್‌ನ ಅನ್ಬಾರ್ ಪ್ರಾಂತ್ಯದಲ್ಲಿ ಸೇನಾ ಕಾರ್ಯಾಲಯದಲ್ಲಿ ರವಿವಾರ ತಡರಾತ್ರಿ ನಾಲ್ವರು ಐಸಿಸ್ ಉಗ್ರರು ನಡೆಸಿದ ಆತ್ಮಹತ್ಯಾಬಾಂಬ್ ದಾಳಿಯಲ್ಲಿ ಹಿರಿಯ ಸೇನಾಧಿಕಾರಿ ಹಾಗೂ ಇತರ ಐವರು ಸೈನಿಕರು ಮೃತಪಟ್ಟಿದ್ದಾರೆ.
 ಅನ್ಬಾರ್ ಪ್ರಾಂತದ ಹದಿತಾ ಪ್ರದೇಶದಲ್ಲಿರುವ ಇರಾಕ್ ಸೇನೆಯ ರೆಜಿಮೆಂಟ್ ಮುಖ್ಯಾಲಯದೊಳಗೆ ನುಸುಳಿದ ಐಸಿಸ್ ಬಾಂಬರ್‌ಗಳು, ತಮ್ಮನ್ನೇ ತಾವು ಸ್ಫೋಟಿಸಿಕೊಂಡಾಗ ಸ್ಟಾಫ್ ಬ್ರಿಗೇಡಿಯರ್ ಜನರಲ್ ಅಲಿ ಅಬೌದ್, ಲೆ.ಕರ್ನಲ್ ಪರ್ಹಾನ್ ಇಬ್ರಾಹೀಂ ಹಾಗೂ ಇತರ ನಾಲ್ವರು ಸಾವನ್ನಪ್ಪಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News