ಇರಾಕ್: ಐಸಿಸ್ ವಿರುದ್ಧ ನಿರ್ಣಾಯಕ ಕಾರ್ಯಾಚರಣೆ ಆರಂಭ
Update: 2016-03-01 23:30 IST
ಬಾಗ್ದಾದ್,ಮಾ.1: ಐಸಿಸ್ ಉಗ್ರರ ವಿರುದ್ಧ ಮಂಗಳವಾರ ನಿರ್ಣಾಯಕ ಕಾರ್ಯಾಚರಣೆ ಆರಂಭಿಸಿರುವ ಇರಾಕಿ ಸೇನೆಯು, ಅರೆಸೈನಿಕ ಪಡೆಗಳು ಹಾಗೂ ವೈಮಾನಿಕ ಬೆಂಬಲದೊಂದಿಗೆ ರಾಜಧಾನಿ ಬಾಗ್ದಾದ್‌ನ ಉತ್ತರಕ್ಕಿರುವ ಪ್ರಮುಖ ಪ್ರದೇಶವೊಂದನ್ನು ಸುತ್ತುವರಿದಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಗ್ದಾದ್‌ನಿಂದ 95 ಕಿ.ಮೀ. ಉತ್ತರಕ್ಕಿರುವ ಸಮಾರ ನಗರದ ಕೃಷಿ ಪ್ರದೇಶವೊಂದರ ಮೇಲೆ ಇಂದು ನಸುಕಿನಲ್ಲಿ ನೂತನ ಆಕ್ರಮಣ ಕಾರ್ಯಾಚರಣೆ ಆರಂಭಗೊಂಡಿತೆಂದು ಜಂಟಿ ಕಾರ್ಯಾಚರಣೆಗಳ ಕಮಾಂಡ್ ಬಿಡುಗಡೆಗೊಳಿಸಿರುವ ಹೇಳಿಕೆಯು ತಿಳಿಸಿದೆ.