11 ಗರ್ಭಿಣಿಯರಿಗೆ ಝಿಕಾ
Update: 2016-03-01 23:33 IST
ಮೆಕ್ಸಿಕೊ, ಮಾ.1: ಮೆಕ್ಸಿಕೊದಲ್ಲಿ 11 ಮಂದಿ ಗರ್ಭಿಣಿಯರಿಗೆ ಝಿಕಾ ವೈರಸ್ ಸೋಂಕು ತಗಲಿರುವುದಾಗಿ ಸೋಮವಾರ ಸರಕಾರದ ಹೇಳಿಕೆಯೊಂದು ತಿಳಿಸಿದೆ.
ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ ಝೈಕಾ ವೈರಸ್‌ನ ಬಹುತೇಕ ಪ್ರಕರಣಗಳು ಗಲ್ಫ್ ಪ್ರದೇಶದ ಕರಾವಳಿ ರಾಜ್ಯವಾದ ಮೆಕ್ಸಿಕೊದ ಓಕ್ಸಾಕಾ ಹಾಗೂ ಚಿಯಾಪಾಸ್ ಗಳಲ್ಲಿ ಪತ್ತೆಯಾಗಿರುವುದಾಗಿ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ. ಫೆಬ್ರವರಿ ತಿಂಗಳ ಮಧ್ಯದಿಂದೀಚೆಗೆ ಝಿಕಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಪೈಕಿ 80 ಪ್ರಕರಣಗಳು ದೃಢಪಟ್ಟಿವೆೆ.