×
Ad

ಕೋರ್ಟ್ ಮೆಟ್ಟಲೇರಿದ ಕ್ಯಾಪ್ಟನ್ ಸಿಮ್ರತ್‌ಪಾಲ್ ಸಿಂಗ್

Update: 2016-03-01 23:49 IST

 ನ್ಯೂಯಾರ್ಕ್,ಮಾ.1: ತನ್ನ ಧಾರ್ಮಿಕ ನಂಬಿಕೆಗಳ ಕಾರಣದಿಂದಾಗಿ, ಅಮೆರಿಕ ಸೇನೆಯಲ್ಲಿ ತನಗೆ ತಾರತಮ್ಯ ಮಾಡಲಾಗುತ್ತಿದೆಯೆಂದು ಆರೋಪಿಸಿ, ಪ್ರಶಸ್ತಿ ಪುರಸ್ಕೃತ ಸಿಖ್‌ಸೈನಿಕರೊಬ್ಬರು ನ್ಯಾಯಾಲಯದ ಮೆಟ್ಟಲೇರಿದ್ದಾರೆ.

ಸಿಖ್ ಧರ್ಮೀಯರಾದ 28 ವರ್ಷ ವಯಸ್ಸಿನ ಕ್ಯಾಪ್ಟನ್ ಸಿಮ್ರತ್‌ಪಾಲ್ ಸಿಂಗ್‌ಗೆ ಕಳೆದ ವರ್ಷ ಅಮೆರಿಕ ಸೇನೆಯು ತಾತ್ಕಾಲಿಕ ಅವಧಿಗೆ ಧಾರ್ಮಿಕ ರಿಯಾಯಿತಿಗಳನ್ನು ನೀಡಿತ್ತು.
   
    ಇದರಿಂದಾಗಿ, ಅವರು ಸಿಖ್ ಪೇಟಾವನ್ನು ಧರಿಸಲು ಹಾಗೂ ತಲೆಕೂದಲು ಮತ್ತು ಗಡ್ಡವನ್ನು ಕತ್ತರಿಸಿಕೊಳ್ಳದೆ ಇರಲು ಅನುಮತಿ ನೀಡಿತ್ತು. ಮಾರ್ಚ್ 31ರವರೆಗೆ ಅವರಿಗೆ ಈ ವಿನಾಯಿತಿ ನೀಡಲಾಗಿದೆ. ಆದರೆ ಅಮೆರಿಕ ಸೇನೆ ಇತ್ತೀಚೆಗೆ ಸಿಮ್ರತ್‌ಗೆ ಜಾರಿಗೊಳಿಸಿದ ಆದೇಶವೊಂದರಲ್ಲಿ, ಸೇನೆಯಲ್ಲಿ ಮುಂದುವರಿಯಬೇಕಾದರೆೆ ಹೆಚ್ಚುವರಿ ಪರೀಕ್ಷೆಗೆ ಒಳಗಾಗಬೇಕೆಂದು ಪೂರ್ವಶರತ್ತನ್ನು ಒಡ್ಡಿದೆಯೆಂದು ಅವರ ಪರವಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಮ್ಯಾಕ್‌ಡರ್ಮಟ್ ವಿಲ್ ಆ್ಯಂಡ್ ಎಮೆರಿ ಕಂಪೆನಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
 
ಸಿಮ್ರತ್ ಸಿಂಗ್‌ಗೆ ನ್ಯಾಯ ಒದಗಿಸಲು ಈ ಕಾನೂನುಸೇವಾ ಸಂಸ್ಥೆಯು ಸಿಖ್ ಒಕ್ಕೂಟ ಹಾಗೂ ಧಾರ್ಮಿಕ ಸ್ವಾತಂತ್ರ ಕುರಿತ ಬೆಕರ್ ಫಂಡ್ ಜೊತೆಗೆ ಕೈಜೋಡಿಸಿದೆ. ಸಿಮ್ರತ್ ಸಿಂಗ್ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಯ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ರಸ್ತೆಗಳಲ್ಲಿ ಸ್ಫೋಟಕಗಳನ್ನು ತೆರವುಗೊಳಿಸಿದ್ದಕ್ಕಾಗಿ ‘ಕಂಚಿನ ನಕ್ಷತ್ರ’ ಪದಕ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News