×
Ad

ಜಿದ್ದಾ ಬೆಂಕಿ ಅಕಸ್ಮಿಕ: ಒಂದೇ ಕುಟುಂಬದ ಮೂವರ ಮೃತ್ಯು

Update: 2016-03-02 19:08 IST

 ಜಿದ್ದಾ, ಮಾರ್ಚ್.2: ಮನೆಯೊಳಗೆ ಬೆಂಕಿ ಆಕಸ್ಮಿಕ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಮೃತರಾಗಿದ್ದಾರೆ. ಜಿದ್ದಾದ ಪಶ್ಚಿಮ ಪ್ರಾಂತದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಸಿವಿಲ್ ಡಿಫೆನ್ಸ್ ಮಕ್ಕಾ ವಲಯದ ವಕ್ತಾರ ಕರ್ನಲ್ ಸಈದ್ ಸರ್ಹಾನ್ ತಿಳಿಸಿದ್ದಾರೆ.

48ವರ್ಷ ಪ್ರಾಯದ ತಾಯಿ,28ವರ್ಷದ ಮಗಳು ಹಾಗೂ ಐದುವರ್ಷ ಪ್ರಾಯದ ಮಗು ಮೃತರಾಗಿದ್ದಾರೆ. ಕಟ್ಟಡದ ಎರಡನೆ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಹೊಗೆ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ಮೂವರೂ ಮೃತರಾಗಿದ್ದಾರೆ ಎಂದು ಸಈದ್ ಸರ್ವಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News