ಹಾಕಿ: ಸ್ಕಾಟ್ಲೆಂಡ್ ವಿರುದ್ಧ ಭಾರತಕ್ಕೆ ಜಯ
Update: 2016-03-02 23:55 IST
ಪೂನಂ ರಾಣಿ ಅವಳಿ ಗೋಲು
ಸ್ಟೆಲ್ಲನ್‌ಬಾಕ್(ದಕ್ಷಿಣ ಆಫ್ರಿಕ), ಮಾ.2: ಪೂನಂ ರಾಣಿ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತದ ಮಹಿಳಾ ಹಾಕಿ ತಂಡ ಸ್ಕಾಟ್ಲೆಂಡ್ ತಂಡವನ್ನು 3-0 ಅಂತರದಿಂದ ಮಣಿಸಿತು. ಈ ಮೂಲಕ ದಕ್ಷಿಣ ಆಫ್ರಿಕ ಪ್ರವಾಸವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದೆ.
ರವಿವಾರ ಜರ್ಮನಿಯ ವಿರುದ್ಧ 2-3 ಅಂತರದ ಸೋತಿದ್ದ ಭಾರತ ಬುಧವಾರ ಇಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಚೇತರಿಕೆಯ ಪ್ರದರ್ಶನ ನೀಡಿತು.
ರಾಣಿ ಪೆನಾಲ್ಟಿ ಕಾರ್ನರ್‌ನ ಮೂಲಕ ಮೊದಲ ಗೋಲು ಬಾರಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ವಂದನಾ ಕಟಾರಿಯಾ ಭಾರತದ ಮುನ್ನಡೆಯನ್ನು 2-0ಗೆ ಏರಿಸಿದರು.
ಅಂತಿಮ ಕ್ಷಣದಲ್ಲಿ ಮತ್ತೊಂದು ಗೋಲು ಬಾರಿಸಿದ ರಾಣಿ ಭಾರತ 3-0 ಅಂತರದಿಂದ ಗೆಲುವು ಸಾಧಿಸಿ ದಕ್ಷಿಣ ಆಫ್ರಿಕ ಪ್ರವಾಸವನ್ನು ಗೆಲುವಿನೊಂದಿಗೆ ಕೊನೆಗೊಳಿಸಲು ನೆರವಾದರು.