×
Ad

ಮಾ.15ರೊಳಗೆ ಡ್ಯಾನ್ಸ್ ಬಾರ್‌ಗಳಿಗೆ ಪರವಾನಿಗೆ ನೀಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ಆದೇಶ

Update: 2016-03-02 23:59 IST


ಹೊಸದಿಲ್ಲಿ: ಡ್ಯಾನ್ಸ್ ಬಾರ್‌ಗಳಿಗೆ ಮಾ.15ರೊಳಗೆ ಪರವಾನಿಗೆಗಳನ್ನು ಮಂಜೂರು ಮಾಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಬುಧವಾರ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ.

ಡ್ಯಾನ್ಸ್ ಬಾರ್‌ನಿಂದ ಸಿಸಿಟಿವಿ ಮೂಲಕ ದೃಶ್ಯಗಳು ಸಮೀಪದ ಪೊಲೀಸ್ ಠಾಣೆಗೆ ನೇರ ಪ್ರಸಾರಗೊಳ್ಳಬೇಕು ಎಂಬ ರಾಜ್ಯ ಸರಕಾರದ ಬೇಡಿಕೆಗೆ ನ್ಯಾಯಾಲಯವು ಮಣೆ ಹಾಕಲಿಲ್ಲ. ಸಿಸಿಟಿವಿ ಮೂಲಕ ನೃತ್ಯಗಳು ನಡೆಯುವ ಸ್ಥಳದ ಚಿತ್ರೀಕರಣವು ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಅದು ಹೇಳಿತು. ಡ್ಯಾನ್ಸ್ ಬಾರ್‌ಗಳನ್ನು ತೆರೆಯಲು ಪರವಾನಿಗೆ ನೀಡುವ ಮುನ್ನ ಮಹಾರಾಷ್ಟ್ರ ಪೊಲೀಸರು ತಮ್ಮ ಮೇಲೆ 24 ಹೊಸ ಶರತ್ತುಗಳನ್ನು ಹೇರಿದ ನಂತರ ಡ್ಯಾನ್ಸ್ ಬಾರ್ ಅಸೋಸಿಯೇಶನ್‌ನ ಸದಸ್ಯರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News