ಮಂಗಳೂರಿನಲ್ಲಿ ಎರಡನೆ ದಿನವೂ ಚಿನ್ನಾಭರಣ ಮಳಿಗೆ ಬಂದ್

Update: 2016-03-03 13:52 GMT

ಮಂಗಳೂರು,ಮಾ.3:ಕೇಂದ್ರ ಬಜೆಟ್‌ನಲ್ಲಿ ಚಿನ್ನದ ಆಭರಣಗಳಿಗೆ ಕೇಂದ್ರ ಸರಕಾರವು ಅಬಕಾರಿ ಸುಂಕ ಮತ್ತು ಸೇವಾ ಶುಲ್ಕ ಇತ್ಯಾದಿ ವಿಧಿಸಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿನ್ನಾಭರಣ ಮಳಿಗೆಗಳು ಎರಡನೆ ದಿನವಾದ ಇಂದು ಕೂಡ ಮಳಿಗೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದವು.

   ಗೋಲ್ಡ್ ಆ್ಯಂಡ್ ಜುವೆಲ್ಲರಿ ಫೆಡರೇಶನ್ ಮತ್ತು ಇಂಡಿಯನ್ ಜುವೆಲ್ಲರ್ಸ್ ಅಸೋಸಿಯೇಶನ್ ಕರೆಯಂತೆ ದಕ್ಷಿಣ ಕನ್ನಡ ಜಿಲ್ಲಾ ಸ್ವರ್ಣ ವ್ಯಾಪಾರಿಗಳ ಸಂಘವು ಉದ್ಯಮ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸುವಂತೆ ಮಾ.2 ರಿಂದ ಮಳಿಗೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದೆ.

    ದ.ಕ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ಚಿನ್ನಾಭರಣಗಳನ್ನು ಮುಚ್ಚಿದ್ದರಿಂದ ಯಾವುದೆ ವಹಿವಾಟು ಇಂದು ಕೂಡ ನಡೆಯಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಾರ್ಪೋರೇಟ್ ಮಾದರಿಯ ಬೃಹತ್ ಚಿನ್ನದ ಮಳಿಗೆಗಳು ಸೇರಿದಂತೆ ಸಾವಿರಾರು ಸಣ್ಣ ಸಣ್ಣ ಅಂಗಡಿಗಳು ಮುಷ್ಕರದಲ್ಲಿ ಭಾಗವಹಿಸಿದ್ದವು. ಮೂರು ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ ಮಾ.4 ರ ತನಕ ಚಿನ್ನಾಭರಣ ಖರೀದಿಗೆ ಗ್ರಾಹಕರಿಗೆ ಸಮಸ್ಯೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News