×
Ad

ಸಿಂಹಗಳೊಂದಿಗೆ ಹೊರಳಾಡುವ ರಿಚರ್ಡ್ಸನ್ ರನ್ನು ರೂಪದರ್ಶಿ ಮಾಡಿದ ಮರ್ಸಿಡಿಸ್ ಬೆಂಝ್

Update: 2016-03-04 17:26 IST

ಪ್ರಿಟೋರಿಯಾ, ಮಾರ್ಚ್.4:ಕ್ರೂರ ಮೃಗಗಳೆಂಬ ವಿಶೇಷಗಳನ್ನೇ ಕೆವಿನ್ ರಿಚರ್ಡ್ಸನ್ ಹತ್ತಿರ ಬಂದರೆ ಸಿಂಹಗಳು ಮರೆತು ಬಿಡುತ್ತವೆ. ಕ್ರೌರ್ಯಗಳನ್ನೆಲ್ಲ ದೂರವಿಟ್ಟು ಅವರನ್ನು ಅನುಸರಿಸ ತೊಡಗುತ್ತವೆ. ಲಯನ್ ವಿಸ್ಪೆರರ್ ಎಂದು ಖ್ಯಾತರಾದ ಕೆವಿನ್‌ರ ಜೀವನ ಯಾರನ್ನೂ ಆಶ್ಚರ್ಯ ಚಕಿತ ಗೊಳಿಸಬಹುದು.

 ಕೆವಿನ್ ಸಿಂಹದೊಂದಿಗೆ ಹೊರಳಾಡುವ ದೃಶ್ಯಗಳನ್ನು ಮೆರ್ಸಿಡಿಸ್ ಬೆಂಝ್ ಹೊಸ ಜಾಹೀರಾತಿನಲ್ಲಿ ಪ್ರಕಟಿಸಿದೆ. ಸಿಂಹಗಳನ್ನು ಹಿಡಿದಾಡುವ ಕೆವಿನ್‌ರಿಚರ್ಡ್ಸನ್‌ರ ಚಿತ್ರಗಳನ್ನು ದಕ್ಷಿಣಾಫ್ರಿಕಾದ ಪ್ರಿಟೋರಿಯಾದ ಪ್ರಾಣಿಧಾಮ ಕೇಂದ್ರದಲ್ಲಿ ಆಡ್ರಿಯಾನ್ ಸ್ಟೈನ್ ಫೋಟೊ ತೆಗೆದು ಮೆರ್ಸಿಡಿಸ್‌ಗೆ ಬಳಸಿದ್ದಾರೆ.

ಮೃಗಗಳನ್ನು ನಿಯಂತ್ರಿಸಲು ಸಂಕಲೆಗಳು ಬೇಕೆಂಬ ಹಳೆಯ ಅಭಿಪ್ರಾಯಗಳನ್ನು ಕೆವಿನ್ ಬುಡಮೇಲುಗೊಳಿಸಿದ್ದಾರೆ. ಸಿಂಹಗಳನ್ನು ಪ್ರೀತಿಯಿಂದಲೂ ಗೆಲ್ಲಬಹುದು ಎಂದು ಪ್ರಿಟೋರಿಯಾದಲ್ಲಿ ಸಾಧಿಸಿ ತೋರಿಸಿದ್ದಾರೆ. ಸುಮೂರು ಮೂವತ್ತು ಸಿಂಹಗಳು ಇಲ್ಲಿವೆ. ಪ್ರತಿಯೊಂದು ಸಿಂಹಗಳ ನಿಕಟತೆಯನ್ನು ಹೊಂದಿರುವ ಕೆವಿನ್ ಅನೇಕ ಡಾಕ್ಯುಮೆಂಟರಿಗಳಿಗೆ ವಸ್ತುವಾಗಿದ್ದಾರೆ. ಸಿಂಹಗಳೊಂದಿಗೆ ಕೆವಿನ್ ಮಾತಾಡುವುದು ಮತ್ತು ಅವು ಅದಕ್ಕೆ ಸ್ಪಂದಿಸುವುದು ನೋಡಲು ಅದ್ಭುತವಾದ ದೃಶ್ಯವಾಗಿದೆ. ಕಾಡುಮೃಗ ಕೇಂದ್ರದಲ್ಲಿಯೇ ಕೆವಿನ್ ಕೂಡಾ ವಾಸಿಸುತ್ತಿದ್ದಾರೆ.ಸಿಂಹಗಳೊಂದಿಗೆ ಅವರು ಇರುವ ಫೋಟೊ ತೆಗೆಯಲು ಆಡ್ಡಿನ್ ತುಂಬ ಹತ್ತಿರ ಹೋಗಲು ಹೆದರಿದ್ದರು. ಕಂಬಿಗಳ ಹೊರಗಿನಿಂದಮೆರ್ಸಿಡಿಸ್‌ಗಾಗಿ ಅವರು ಕೆವಿನ್ ಮತ್ತು ಸಿಂಹಗಳ ಫೋಟೊ ತೆಗೆದಿದ್ದಾರೆ. ಆಡ್ರಿಯನ್ ಸಿಂಹಗಳೊಂದಿಗೆ ಕೆವಿನ್ ಇರುವ ಈ ಫೋಟೊಗಳಿಗಾಗಿ ದ. ಆಫ್ರಿಕಾದ ಪ್ರಿಟೋರಿಯ ವೆಲ್ಗೇಡಾಶ್ ಪ್ರೈವೆಟ್ ಗೇಮ್ ರಿರ್‌ವಿನಲ್ಲಿ 48 ಗಂಟೆ ವ್ಯಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News