ಕನ್ಹಯಯ್ಯಾರಿಗೆ ಎರಡು ಲಕ್ಷರೂ. ಬಹುಮಾನ ಘೋಷಿಸಿದ ಬಾಲಿವುಡ್ ಹಾಸ್ಯ ನಟ ಕಮಾಲ್‌ಖಾನ್
ಮುಂಬೈ, ಮಾರ್ಚ್.4: ಜಾಮೀನು ಪಡೆದು ಬಿಡುಗಡೆಯಾಗಿ ದೇಶವನ್ನುತನ್ನ ಭಾಷಣದ ಮೂಲಕ ಅಲುಗಾಡಿಸಿದ ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರಿಗೆ ಎರಡು ಲಕ್ಷ ರೂ.ಬಹುಮಾನವನ್ನು ಬಾಲಿವುಡ್ ಹಾಸ್ಯ ನಟ ಕಮಾಲ್ ಖಾನ್ ಘೋಷಿಸಿದ್ದಾರೆ. ಕಳೆದ ದಿವಸ ಜೆಎನ್‌ಯು ಕ್ಯಾಂಪಸ್‌ನಲ್ಲಿ ಕನ್ಹಯ್ಯಾಕುಮಾರ್ ನಡೆಸಿದ ಸೂಪರ್ ಹಿಟ್ ಭಾಷಣಕ್ಕಾಗಿ ಈ ಮೊತ್ತವನ್ನು ಟ್ವಿಟರ್ ಮೂಲಕ ಕಮಾಲ್ ಖಾನ್ ಬಹುಮಾನವಾಗಿ ಘೋಷಿಸಿದ್ದಾರೆ.
ಕನ್ಹಯ್ಯ ಕುಮಾರ್‌ರಿಗೆ ಸಂಬಂಧಿಸಿದ ಯಾರಾದರೂ ತನ್ನ ದಿಲ್ಲಿಯ ಕಚೇರಿಗೆ ಬಂದು ಈ ಮೊತ್ತವನ್ನು ಪಡೆದುಕೊಳ್ಳಬಹುದೆಂದು ಟ್ವಿಟರ್‌ನಲ್ಲಿ ಅವರು ವಿನಂತಿಸಿದ್ಧಾರೆ. ಭಾರತದ ವಿರುದ್ಧ ಘೋಷಣೆ ಕೂಗಿದ್ದರೆಂದು ಬಂಧಿಸಲಾದ ಕನ್ಹಯ್ಯಾ ಕುಮಾರ್‌ರನ್ನು ಹೈಕೋರ್ಟ್ ಜಾಮೀನು ನೀಡಿ ಬಿಡುಗಡೆಗೊಳಿಸಿತ್ತು. ಆನಂತರ ಅವರು ಮಾಡಿದ ಭಾಷಣ ಜನಮನವನ್ನಾಕರ್ಷಿಸಿತ್ತು. ಈ ಸಂದರ್ಭದಲ್ಲಿ ನೆರವಿನ ವಾಗ್ದಾನದೊಂದಿಗೆ ಕಮಾಲ್‌ಖಾನ್ ಮುಂದೆ ಬಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಚಾ ಅಂಗಡಿದಾರನ ಮಗನಾದರೆ ಕನ್ಹಯ್ಯ ಅದಕ್ಕಿಂತಲೂ ಬಡವರ ಮಗನಾಗಿದ್ದಾರೆ ಎಂದು ಕಮಾಲ್ ಖಾನ್ ಹೇಳಿದ್ದಾರೆ. ಜನಸಾಮಾನ್ಯರು ಯಾವಾಗಲೂ ಬಡವರೊಂದಿಗಿರುತ್ತಾರೆ ಆದ್ದರಿಂದ ಕನ್ಹಯ್ಯಾ ಕುಮಾರ್‌ರಿಗೆ ಉತ್ತಮ ಭವಿಷ್ಯವಿದೆಯೆಂದು ಅವರು ಹೇಳಿದರು.