×
Ad

ಭಾರತದಿಂದ ಸ್ವಾತಂತ್ರವಲ್ಲ ಭಾರತದೊಳಗೆ ಸ್ವಾತಂತ್ರ: ಕನ್ಹಯ್ಯಾ ಕುಮಾರ್

Update: 2016-03-04 23:43 IST

‘ರೋಹಿತ್ ವೇಮುಲಾ ನಮಗೆ ಆದರ್ಶ, ಅಫ್ಝಲ್‌ಗುರು ಅಲ್ಲ’

ಹೊಸದಿಲ್ಲಿ, ಮಾ.4: ಜಾಮೀನಿನ ಮೇಲೆ ಕಾರಾಗೃಹದಿಂದ ಬಿಡುಗಡೆ ಹೊಂದಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್, ಮಧ್ಯರಾತ್ರಿಯ ವೇಳೆ ವಿವಿಗೆ ಆಗಮಿಸಿ, ತನ್ನ ವಿರುದ್ಧ ದೇಶದ್ರೋಹದ ಆಪಾದನೆಗೆ ಕಾರಣವಾದ ‘ಆಝಾದಿ’ ಎಂಬ ಶಬ್ದವನ್ನು ಮತ್ತೆ ಮತ್ತೆ ಕೂಗಿದ್ದಾರೆ. ಈ ವೇಳೆ ನೂರಾರು ವಿದ್ಯಾರ್ಥಿಗಳು ಹರ್ಷೋದ್ಗಾರ ಮಾಡಿದ್ದಾರೆ.

ಹಸಿವೆ, ಭ್ರಷ್ಟಾಚಾರ, ತಾರತಮ್ಯ, ಜಾತಿವಾದ, ಮನುವಾದ ಹಾಗೂ ಹಿಂದುಳಿಯುವಿಕೆಗಳಿಂದ ‘ಸ್ವಾತಂತ್ರ’ ಬೇಕೆಂಬ ಘೋಷಣೆಗಳೊಂದಿಗೆ ಅವರು ಭಾಷಣ ಆರಂಭಿಸಿದರು.

ತಾವು ಭಾರತದಿಂದ ಸ್ವಾತಂತ್ರವನ್ನು ಕೇಳುತ್ತಿಲ್ಲ. ಭಾರತದೊಳಗೆ ಸ್ವಾತಂತ್ರವನ್ನು ಕೇಳುತ್ತಿದ್ದೇವೆಂದು 28ರ ಹರೆಯದ ಕನ್ಹಯ್ಯಿ ನೆರೆದ ವಿದ್ಯಾರ್ಥಿ ಸಮೂಹಕ್ಕೆ ಹೇಳಿದರು.

ವಿಶ್ವಾದ್ಯಂತ ಅಲೆಯೆಬ್ಬಿಸಿದ ಹಾಗೂ ಪ್ರಬಲ ರಾಜಕೀಯ ಪ್ರತಿಕ್ರಿಯೆಗಳಿಗೆ ಕಾರಣವಾದ ತಾಸು ದೀರ್ಘ ಭಾಷಣದಲ್ಲಿ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತವರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿಜಿ ಸ್ಟಾಲಿನ್-ಕ್ರುಶ್ಚೇವ್ ಬಗ್ಗೆ ಮಾತನಾಡಿದಾಗ, ಟಿವಿಯೊಳಗೆ ನುಗ್ಗಿ ಅವರ ಮೇಲಂಗಿಯನ್ನು ಹಿಡಿದು, ನಾವು ಹಿಟ್ಲರ್‌ನ ಬಗ್ಗೆ ಮಾತನಾಡೋಣ ಎಂದು ಹೇಳಬೇಕೆನಿಸಿತೆಂದು ಕನ್ಹಯ್ಯೆ ಹರ್ಷೋದ್ಗಾರಗಳ ನಡುವೆ ಹೇಳಿದರು.

ದೇಶದೊಳಗೊಂದು ಸಮಸ್ಯೆ ಇರುವುದಾದರೆ ಅದರಿಂದ ಸ್ವಾತಂತ್ರಬೇಕೆಂದು ಕೇಳುವುದು ತಪ್ಪೇ? ಸ್ವಾತಂತ್ರವನ್ನು ಕೇಳಲು ಅವನಾರು ಎಂದು ಪ್ರಶ್ನಿಸುತ್ತಾರೆ. ಭಾರತ ಯಾರನ್ನಾದರೂ ಗುಲಾಮನನ್ನಾಗಿ ಮಾಡಿಕೊಂಡಿದೆಯೇ? ಇಲ್ಲ. ಅಂದಮೇಲೆ ಸಹಜವಾಗಿಯೇ ಭಾರತದಿಂದಲ್ಲವೆಂದು ಕನ್ಹಯ್ಯಾ ಹೇಳಿದರು.

ಫೆ.9ರಂದು ವಿವಿಯಲ್ಲಿ ನಡೆಸಲಾಗಿದ್ದ ಸಂಸದ್ಭವನ ದಾಳಿಯ ಅಪರಾಧಿ ಅಫ್ಝಲ್ ಗುರು ಪರ ಕಾರ್ಯಕ್ರಮದ ವೇಳೆ ದೇಶ ವಿರೋಧಿ ಘೋಷಣೆ ಕೂಗಿದ್ದ ಆರೋಪದಲ್ಲಿ ದೇಶದ್ರೋಹದ ಆಪಾದನೆಯ ಮೇಲೆ ಬಂದಿಸಲ್ಪಟ್ಟಿದ್ದ ಕನ್ಹಯ್ಯಿ 21 ದಿನಗಳ ಬಳಿಕ ಸಶರ್ತ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ನಿನ್ನೆ ಕರೆ ನೀಡಿದ್ದರೆಂದೂ, ಅವರು ‘ಭಾರತದಿಂದ ಸ್ವಾತಂತ್ರ’ ಬೇಕೆಂದು ಮತ್ತೆ ಮತ್ತೆ ಕರೆ ನೀಡಿದ್ದರೆಂದೂ ಆರೋಪಿಸಲಾಗಿತ್ತು.

ನಿನ್ನೆ ರಾತ್ರಿ ಕನ್ಹಯ್ಯಿ ಜೆಎನ್‌ಯು ಆವರಣಕ್ಕೆ ಬಂದಾಗ, ‘ದೇಶದ್ರೋಹಿ’ ಭಾಷಣ ಮಾಡಿದ್ದರೆಂದು ಪೊಲೀಸರು ಆರೋಪಿಸಿದ್ದ ಸ್ಥಳದಲ್ಲೇ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಸೇರಿದ್ದರು. ಕನ್ಹಯ್ಯಾ ಭಾಷಣ ಮಾಡುತ್ತಿರುವ ವೇಳೆ, ಪ್ರತಿಕ್ರಿಯೆಗಳು ಸುರಿಯ ತೊಡಗಿದವು. ಆತನನ್ನು ಹೊಗಳಿದವರಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊದಲಿಗರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News