×
Ad

ಅತ್ಯಾಚಾರಕ್ಕೊಳಗಾದ ಒಂಬತ್ತನೆ ತರಗತಿ ವಿದ್ಯಾರ್ಥಿನಿಗೆ ಶಾಲೆಯನ್ನೇ ನಿಷೇಧಿಸಿದ ಪ್ರಾಂಶುಪಾಲ!

Update: 2016-03-05 10:52 IST

ಲುಧಿಯಾನ,ಮಾರ್ಚ್.5: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳನ್ನು ಯಾವುದೋ ತಪ್ಪಿಗಾಗಿ ನರಕ ಸದೃಶ ಯಾತನೆ ಅನುಭವಿಸುವ ಶಿಕ್ಷೆಯನ್ನು ನೀಡಲಾಗಿದೆ. ಲೈಂಗಿಕ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯನ್ನು ಶಿಕ್ಷಣದ ಹಕ್ಕಿನಿಂದ ವಂಚಿತಗೊಳಿಸಿರುವ ಘಟನೆಯೊಂದು ವರದಿಯಾಗಿದೆ. ವಿದ್ಯಾರ್ಥಿನಿ ತನ್ನ ಶಿಕ್ಷಣವನ್ನು ಮುಂದುವರಿಸಲು ಪ್ರಯತ್ನಿಸಿದಾಗ ನೆರವು ನೀಡುವ ಬದಲಾಗಿ ಮನೆಯಲ್ಲಿಯೇ ಉಳಿಯುವಂತೆ ಸಲಹೆ ನೀಡಿದ ಪ್ರಾಂಶುಪಾಲರು ಬೇಜವಾಬ್ದಾರಿಕೆಯಿಂದ ವರ್ತಿಸಿದ್ದಾರೆ.

ಪ್ರಾಂಶುಪಾಲರು ಸಂತ್ರಸ್ತೆಯನ್ನು ಇಂತಹ ಹುಡುಗಿ ತಮ್ಮ ಶಾಲೆಯಲ್ಲಿ ಕಲಿತರೆ ಶಾಲೆಯ ವಾತಾವರಣ ಹಾಳಾಗಬಹುದು ಎಂದು ಹೇಳಿ ಅವಮಾನಿಸಿದ್ದಾರೆ. ಈ ಕುರಿತು ವಿದ್ಯಾರ್ಥಿನಿಯ ಮನೆಯವರು ಜಿಲ್ಲಾಶಿಕ್ಷಣಾಧಿಕಾರಿಗೆ ಪತ್ರ ಬರೆದು ಪ್ರಾಂಶುಪಾಲರ ವಿರುದ್ಧ ದೂರು ನೀಡಿದ್ದಾರೆ. ತನ್ನ ಮಗಳ ಶಿಕ್ಷಣದ ಹಕ್ಕನ್ನು ಕೊಡಿಸಬೇಕೆಂದು ವಿನಂತಿಸಿದ್ದಾರೆ.

ಗೋವಿಂದಗಡದ ಒಂಬತ್ತನೆ ತರಗತಿ ವಿದ್ಯಾರ್ಥಿನಿಯನ್ನು ಕಳೆದ ಡಿಸೆಂಬರ್ 27ರಂದು ಮೂವರು ಯುವಕರು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಹತ್ತು ದಿವಸಗಳ ಕಾಲ ಯಾವುದೋ ಅಜ್ಞಾತ ಸ್ಥಳದಲ್ಲಿ ಬಂಧಿಸಿಟ್ಟು ಅವಳನ್ನು ಅತ್ಯಾಚಾರವೆಸಗಿದ್ದರು. ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿಯ ತಂದೆ ದುಷ್ಕರ್ಮಿಗಳ ಹೆದರಿಕೆಯಿಂದ ಅವಳನ್ನು ಶಾಲೆ ಕಳುಹಿಸಲು ಹೆದರಿಕೆಯಾಗಿತ್ತು. ಆದರೆ ರಾಷ್ಟ್ರೀಯ ಹಿಂದುಳಿದ ಆಯೋಗದ ಅಧ್ಯಕ್ಷ ಡಾ. ರಾಜ್‌ಕುಮಾರ ವೆರಕಾರರ ಸಲಹೆಯಂತೆ ಪುನಃ ಶಾಲೆಗೆ ಕಳುಹಿಸಿದ್ದೇವೆ. ಆದರೆ ಪ್ರಾಂಶುಪಾಲರು ಶಾಲೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆಂದು ಹೇಳಿದ್ದಾರೆ. ವಿದ್ಯಾರ್ಥಿನಿಯ ತಂದೆಯ ಹೇಳಿಕೆ ಪ್ರಕಾರ ಪ್ರಾಂಶುಪಾಲರು ಶಾಲೆಯಲ್ಲಿ ಅವಳ ಹಾಜರಿಯನ್ನು ಹಾಕಲಾಗುವುದು ಟ್ಯೂಶನ್ ಕೊಟ್ಟು ಕಲಿಸಿರಿ ಪರೀಕ್ಷೆ ಬರೆಯಲು ಶಾಲೆಗೆ ಬರಲಿ ಎಂದು ಹೇಳಿದ್ದಾರೆ. ಪ್ರಾಂಶುಪಾಲರ ಮಾತಿಂದ ವಿದ್ಯಾರ್ಥಿನಿಯ ತಂದೆ ತುಂಬ ದುಃಖಿತರಾಗಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿಗೆ ಅವರು ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News