ಕನ್ನಯ್ಯಾ ಕುಮಾರ್‌ಗೆ ಜೀವ ಬೆದರಿಕೆ; ಕೊಲೆ ಮಾಡಿದವರಿಗೆ 11 ಲಕ್ಷ ರೂ. ಬಹುಮಾನ
Update: 2016-03-05 11:15 IST
ಹೊಸದಿಲ್ಲಿ: ಜವಾಹರ್‌ಲಾಲ್ ವಿವಿಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ನಯ್ಯ ಕುಮಾರ್‌ಗೆ ಜೀವಬೆದರಿಕೆಯನ್ನೊಡ್ಡುವ ಪೋಸ್ಟರ್‌ಗಳು ದಿಲ್ಲಿಯಲ್ಲಿ ಕಾಣಿಸಿಕೊಂಡಿವೆ.
ಕನ್ನಯ್ಯನನ್ನು ಕೊಂದರೆ 11 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಪೋಸ್ಟರ್‌ನಲ್ಲಿ ತಿಳಿಸಲಾಗಿದೆ. ಪೂವಾಂಚಲ್ ಸೇನೆಯ ಹೆಸರಿನಲ್ಲಿ ಪೋಸ್ಟರ್‌ಗಳನ್ನು ಹಚ್ಚಲಾಗಿದೆ. ಪೂರ್ವಾಂಚಲ್ ಸೇನೆ ಸಂಘಪರಿವಾರದ ಬೆಂಬಲದಲ್ಲಿ ಕಾರ್ಯಾಚರಿಸುತ್ತಿದೆ. ಪೂರ್ವಾಂಚಲ್ ಸೇನೆಯ ಮುಖಂಡ ಅಮಿತ್ ಕುಮಾರ್‌ನ ಹೆಸರಿನಲ್ಲಿ ಪೋಸ್ಟರ್ ಹಚ್ಚಲಾಗಿದ್ದು, ದಿಲ್ಲಿ ಪ್ರೆಸ್‌ಕ್ಲಬ್ ಸಮೀಪ ಪೋಸ್ಟರ್‌ಗಳನ್ನು ಹಾಕಲಾಗಿದೆ.
ಈ ನಡುವೆ, ಕನ್ನಯ್ಯನ ನಾಲಗೆ ಕತ್ತರಿಸುವವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಭಾರತೀಯ ಜನತಾ ಯುವಮೋರ್ಚಾ ಮುಖಂಡ ಘೋಷಿಸಿದ್ದಾನೆ. ಉತ್ತರ ಪ್ರದೇಶದ ಬದಾಯು ಜಿಲ್ಲೆಯ ಯುವಮೋರ್ಚಾ ಮುಖಂಡ ಕುಲ್‌ದೀಪ್ ವರ್ಷನಯ್ ಈ ವಿವಾದ ಹೇಳಿಕೆ ನೀಡಿದ್ದಾನೆ.