×
Ad

ಪಾಕ್ ಮಾಜಿ ವೇಗಿ ಅಕ್ತರ್ ಹಣಕ್ಕಾಗಿ ಭಾರತವನ್ನು ಹೊಗಳುವ ಕೆಲಸಕ್ಕಿಳಿದಿದ್ದಾರೆ: ಸೆಹ್ವಾಗ್

Update: 2016-03-05 11:28 IST

ಹೊಸದಿಲ್ಲಿ, ಮಾರ್ಚ್.5: ಮಾಜಿ ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನದ ಮಾಜಿ ವೇಗಿ ಮತ್ತು ಟಿವಿ ವೀಕ್ಷಕ ವಿವರಣೆಕಾರ ಶುಐಬ್ ಅಕ್ತರ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಶುಐಬ್ ಹಣ ಪಡೆದು ಭಾರತವನ್ನು ಹೊಗಳುತ್ತಿದ್ದಾರೆ. ಆಂಗ್ಲ ಪತ್ರಿಕೆ ಡೆಕ್ಕನ್ ಕ್ರಾನಿಕಲ್‌ಗೆ ನೀಡಿದ ಸಂದರ್ಶನದಲ್ಲಿ ಅಕ್ತರ್ ಭಾರತೀಯ ಚ್ಯಾನೆಲ್‌ಗಳಲ್ಲಿ ಕ್ರಿಕೆಟ್ ಎಕ್ಸ್‌ಪರ್ಟ್‌ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅವರು ಸ್ಟಾರ್‌ಸ್ಪೋಟ್ಸ್‌ನಲ್ಲಿ ಹಿಂದಿ ಕಮೆಂಟ್ರಿ ನೀಡುತ್ತಿದ್ದಾರೆ. ಅಕ್ತರ್ ಕೇವಲ ವ್ಯಾಪಾರಿ ಕಾರಣಗಳಿಗಾಗಿ ಭಾರತವನ್ನು ಹೊಗಳುತ್ತಿದ್ದಾರೆ. ಮತ್ತು ವೀಕ್ಷಕ ವಿವರಣೆಯಿಂದ ಸಂಪಾದಿಸಬೇಕೆಂಬುದಕ್ಕಾಗಿ ಅವರು ಹೊಗಳುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸೆಹ್ವಾಗ್ ಎಂದಿದ್ದಾರೆ. ನೀವು ಯಾವಾಗ ನೋಡಿದರೂ ಅಕ್ತರ್ ಭಾರತವನ್ನು ಹೊಗಳುವ ಕೆಲಸ ಮಾಡುತ್ತಿರುತ್ತಾರೆ. ಯಾರೂ ಕೂಡ ಅಕ್ತರ್ ಭಾರತ ಕ್ರಿಕೆಟ್ ತಂಡವನ್ನು ಇಷ್ಟು ಹೊಗಳಬಹುದೆಂದು ಭಾವಿಸಿರಲಾರರು ಎಂದು ಸೆಹ್ವಾಗ್ ಕುಟುಕಿದ್ದಾರೆ.

ಸೆಹ್ವಾಗ್ ಆಡುವ ವೇಳೆ ಯಾವತ್ತೂ ಭಾರತದ ಮೇಲೆ ಸಹಾನೂ ಭೂತಿ ತೋರಿಸಿದ್ದು ತನಗೆ ಗೊತ್ತಿಲ್ಲ ಎಂದ ಸೆಹ್ವಾಗ್ ಅವರಿಗೆ ತಾನು ಎದುರಾದಾಗ ಅವರೆಂದೂ ತನ್ನತನವನ್ನು ತೋರಿಸಿಲ್ಲ ಎಂದು ವ್ಯಂಗವಾಡಿದ್ದಾರೆ. ಹಣ ಏನನ್ನೂ ಮಾಡಿಸುತ್ತದೆ ಎಂದು ಸೆಹ್ವಾಗ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News