ನಾಥೂರಾಂ ನಮಗೆ ಎಂದೆಂದಿಗೂ ವೀರಪುರುಷ: ಹಿಂದೂಮಹಾಸಭಾ
Update: 2016-03-05 14:45 IST
ಮೀರತ್: ನಾಥೂರಾಂ ಗೋಡ್ಸೆ ಎಂದೆಂದಿಗೂ ನಮ್ಮ ವೀರಪುರುಷ ಎಂದು ಹಿಂದೂ ಮಹಾಸಭಾ ಹೇಳಿದೆ.
ಗೋಡ್ಸೆಯನ್ನು ಪೂಜಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದದ್ದು ಆಯಾ ರಾಜ್ಯಗಳು ಎಂಬ ಗೃಹಸಚಿವ ರಾಜ್‌ನಾಥ್ ಸಿಂಗ್‌ರ ಹೇಳಿಕೆಯ ಬೆನ್ನಲ್ಲೇ ಹಿಂದೂ ಮಹಾಸಭಾ ಈ ಪ್ರತಿಕ್ರಿಯೆ ನೀಡಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡರೂ ಭಯವಿಲ್ಲ ಎಂದು ಹಿಂದುಮಹಾಸಭಾ ತಿಳಿಸಿದೆ.
ನಮ್ಮ ಪಾರ್ಟಿ ಮುಖಂಡನ ಹೆಸರನ್ನು ನಾವಲ್ಲದೆ ಬೇರೆ ಯಾರು ಹೇಳುತ್ತಾರೆ? ನಾಥುರಾಂ ಗೋಡ್ಸೆ ಎಂದೆಂದಿಗೂ ನಮ್ಮ ವೀರಪುರುಷನಾಗಿದ್ದಾನೆ. ಆತನ ಕಾರಣದಿಂದಲೇ ಭಾರತ ಹೆಚ್ಚು ವಿಭಜನೆಯಾಗದೆ ಉಳಿದಿದೆ. ಮಹಾತ್ಮ ಗಾಂಧಿಯನ್ನು ಆತ ಕೊಂದದ್ದರಲ್ಲಿ ತಪ್ಪೇನಿದೆ? ಗಾಂಧಿಯಲ್ಲ ಭಾರತ, ಹಾಗಾದರೆ ಗೋಡ್ಸೆಯನ್ನು ಬೆಂಬಲಿಸುವುದು ಹೇಗೆ ದೇಶದ್ರೋಹವಾಗುತ್ತದೆ ಎಂದು ಹಿಂದೂಮಹಾಸಭಾದ ಮೀರತ್ ಜಿಲ್ಲಾಧ್ಯಕ್ಷ ಭರತ್ ರಾಜ್‌ಪೂತ್ ಪ್ರಶ್ನಿಸಿದ್ದಾರೆ.