ಕತಾರ್: ಅಧಿಕ ಸಂಬಳದ ವಿದೇಶಿಗಳಿಗೆ ಮನೆಗಳನ್ನು ನೀಡುವುದನ್ನು ನಿಲ್ಲಿಸಿದ ಸರಕಾರ
ದೊಹಾ, ಮಾರ್ಚ್.5: ಅಧಿಕ ಸಂಬಳ ಇರುವ ವಿದೇಶಿ ಉದ್ಯೋಗಿಗಳಿಗೆ ಸರಕಾರ ನೀಡುತ್ತಿದ್ದ ಉಚಿತ ವಾಸ್ತವ್ಯ ಸೌಕರ್ಯಗಳನ್ನು ಸರಕಾರ ಕೊನೆಗೊಳಿಸುತ್ತಿದೆ. ಹೊಸ ಕಾನೂನು ತಿದ್ದುಪಡಿ ಪ್ರಕಾರ ಅಧಿಕ ಸಂಬಳವಿರುವ ಕತರ್ ನಿವಾಸಿಗಳಲ್ಲದ ವಿದೇಶಿಗಳಿಗೆ ಸರಕಾರದ ವತಿಯಿಂದ ವಸತಿ ನೀಡಲಾಗುವುದಿಲ್ಲ. ಆದರೆ ಸಚಿವಾಲಯದ ನೌಕರರು ಸಹಿಹಾಕಿದ ಉದ್ಯೋಗ ಒಪ್ಪಂದದ ವಕ್ತಾರರಿಗೂ ಹೌಸಿಂಗ್ ಅಲವೆನ್ಸ್ ಮುಂದುವರಿಯಲಿದೆ. ಇದಕ್ಕೆ ಸಂಬಂಧಿಸಿದ ಕಾನೂನು ತಿದ್ದುಪಡಿಗೆ ಕ್ರಮವನ್ನು ಹೌಸಿಂಗ್ ಆಂಡ್ ಬಿಲ್ಡಿಂಗ್ ವಿಭಾಗ ಆರಂಭಿಸಿರುವುದಾಗಿ ಪ್ರಾದೇಶಿಕ ಅರಬ್ ಪತ್ರಿಕೆ ವರದಿ ಮಾಡಿದೆ.
ಉದ್ಯೋಗಿಗಳಿಗೆ ಸರಕಾರ ನೀಡಿದ ಒಪ್ಪಂದ ಪುನರ್‌ಪರಿಶೀಲಿಸಲಾಗುತ್ತಿದೆ. ಹೊಸ ಕಾನೂನು ತಿದ್ದುಪಡಿ ಪ್ರಕಾರ ತಿದ್ದು ಪಡಿ ಮಾಡಿಕೊಳ್ಳುವಂತೆ ಸರಕಾರ ವಿವಿಧ ಸಚಿವಾಲಯಗಳಿಗೆ ಸೂಚಿಸಿದೆ. ಈಗಿರುವ ವೇತನ ಮಾನದಂಡ ಪ್ರಕಾರ ಏಳನೆ ಗ್ರೇಡ್ ಮತ್ತು ಅದಕ್ಕಿಂತ ಮೇಲಿನ ಕತರ್‌ನಿವಾಸಿಗಳಲ್ಲದ ಉದ್ಯೋಗಿಗಳಿಗೆ ಸರಕಾರಿ ವತಿಯಿಂದ ವಾಸ್ತವ್ಯ ಸ್ಥಳ ಅಥವಾ ಅದಕ್ಕೆ ಸಮಾನ ಮನೆ ಬಾಡಿಗೆಗಳನ್ನು ನೀಡಲಾಗುವುದು. ಎಂಟು ಮತ್ತು ಒಂಬತ್ತು ಗ್ರೇಡ್ ಇರುವವರಿಗೆ ಮನೆ ಬಾಡಿಗೆ ಅಲವೆನ್ಸ್ ಮಾತ್ರ ನೀಡಲಾಗುವುದು.
ಹತ್ತನೆ ಗ್ರೇಡ್‌ನಲ್ಲಿರುವವರಿಗೆ ಮನೆಬಾಡಿಗೆ ಅಲೆವೆನ್ಸ್‌ಅಲ್ಲದಿದ್ದರೆ ಕುಟುಂಬ ಇಲ್ಲದೆ ಒಂಟಿಯಾಗಿ ವಾಸಿಸುವರಿಗೆ ಉಚಿತವಾಗಿ ವಾಸ ಸೌಕರ್ಯ ನೀಡುವುದು ವಿಧಾನ. ತೈಲಬೆಲೆ ಕುಸಿತ ದೇಶದ ವಿವಿಧ ಕಂಪೆನಿಗಳು ಸರಕಾರಿ ಸಂಸ್ಥೆಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸತೊಡಗಿದೆ. ಇದಲ್ಲದೆ ಹಮದ್ ಮೆಡಿಕಲ್ ಕಾರ್ಫೋರೇಶನ್ ಸಹಿತ ಕೆಲವು ಸಂಸ್ಥೆಗಳು ಸೌಲಭ್ಯ ಅಲೆವೆನ್ಸ್‌ಗಳನ್ನು ಕಡಿತಗೊಳಿಸಿವೆ.
ಕಾನೂನು ಮತ್ತು ಯೋಜನೆಗಳಲ್ಲಿಯೂ ತೈಲ ಕಂಪೆನಿಗಳು ಕೂಡಾ ಅಘೋಷಿತ ನಿಯಂತ್ರಣವನ್ನು ಪಾಲಿಸುತ್ತಿವೆ.