×
Ad

84ನೆ ವಯಸ್ಸಿನಲ್ಲಿ ರೂಪರ್ಟ್ ಮರ್ಡೋಕ್‌ರಿಗೆ ಮದುವೆ: ಮಾಜಿ ಸೂಪರ್ ಮಾಡೆಲ್ ಜೆರಿಹಾಲ್ ವಧು!

Update: 2016-03-05 18:44 IST

ಲಂಡನ್,ಮಾರ್ಚ್.5: ಮಾಧ್ಯಮರಂಗದ ಕುಲಪತಿ ರೂಪರ್ಟ್ ಮರ್ಡೋಕ್‌ರಿಗೆ 84ನೆ ವಯಸ್ಸಿನಲ್ಲಿ ಮತ್ತೊಂದು ಮದುವೆ!

ತನಗಿಂತ 25 ವರ್ಷ ಚಿಕ್ಕವರಾದ 59 ವಯಸ್ಸಿನ ಜೆರಿ ಹಾಲ್‌ರನ್ನು ಮರ್ಡೋಕ್ ವಿವಾಹವಾಗಿದ್ದಾರೆ. ಲಂಡನ್‌ನ ಸ್ಪೆನ್ಸರ್ ಹೌಸ್‌ನಲ್ಲಿ ಸದ್ದುಗದ್ದಲವಿಲ್ಲದೆ ವಿವಾಹ ನಡೆದರೂ ಜೆರಿಗೆ ತೊಡಿಸಿದ ವಿವಾಹ ಉಂಗುರ 25ಕೋಟಿರೂ.ವರೊ ಬೆಲೆಬಾಳುವುದಾಗಿದೆ ಎನ್ನಲಾಗಿದೆ.

ಮಾಜಿ ಸೂಪರ್ ಮಾಡೆಲ್ ಜೆರಿ ಮತ್ತು ಮರ್ಡೋಕ್‌ರು ನಿಕಟವಾಗಿದ್ದಾರೆಂದು ಕೆಲವು ಸಮಯಗಳಿಂದ ಸುದ್ದಿಯಾಗಿತ್ತು. ಜಗತ್ತಿನ ಅತಿದೊಡ್ಡ ಭಾಗ್ಯವಂತ ಸಂತೋಷಿತ ವ್ಯಕ್ತಿ ತಾನೆಂದು ಮರ್ಡೋಕ್ ವಿವಾಹಕ್ಕೆ ಸ್ವಲ್ಪ ಮೊದಲು ಟ್ವೀಟ್ ಮಾಡಿದ್ದಾರೆ. ಮಧುಚಂದ್ರ ಕಾರಣದಿಂದ ಹತ್ತು ದಿವಸಗಳ ಕಾಲ ಸೋಶಿಯಲ್ ಮೀಡಿಯದಲ್ಲಿರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮರ್ಡೋಕ್‌ರ ಮಗ ಲಲ್‌ಚಲನ್ ಮತ್ತು ಅವರ ಪತ್ನಿ ಸಾರಾ ವಿವಾಹಕ್ಕೆ ಸಾಕ್ಷಿಯಾದರು. ನಾಳೆ ಪ್ಲಾಟ್ ಸ್ಟ್ರೀಟ್‌ನ  ಸೈಂಟ್  ಬ್ರೆಂಡ್ಸ್ ಚರ್ಚ್‌ನಲ್ಲಿ ವಿಶಿಷ್ಟಾತಿಥಿಗಳಿಗೆ ವಿವಾಹ ಸತ್ಕಾರ ಏರ್ಪಡಿಸಲಾಗಿದೆ. ಲಂಡನ್ ಮೇಯರ್ ಬೋರಿಸ್ ಜಾನ್ಸನ್ ಮುಂತಾದವರು ಸತ್ಕಾರದಲ್ಲಿ ಭಾಗವಹಿಸಲಿದ್ದಾರೆ. ಮರ್ಡೋಕ್‌ರ ಆರು ಮಕ್ಕಳು ಮತ್ತು ಜೆರಿಯ ನಾಲ್ವರು ಮಕ್ಕಳು ವಿವಾಹಕ್ಕೆ ಬಂದಿದ್ದ ವಿಶೇಷಾತಿಥಿಗಳಾಗಿದ್ದರು.

ಮರ್ಡೋಕ್‌ರಿಗೆ ಇದು ನಾಲ್ಕನೆ ಮದುವೆ. ಮೆಲ್ಬರ್ನ್‌ನ ಏರ್‌ಹೊಸ್ಟೆಸ್ ಪಟ್ರೀಷ್ಯಾ ಬುಕರ್ ಮರ್ಡೋಕ್‌ರ ಮೊದಲ ಪತ್ನಿ,ಆನಂತರ ಸಿಡ್ನಿಯ ಪತ್ರಕರ್ತೆ ಅನ್ನಾ ಟಾವಿನ್‌ರನ್ನು ಜೊತೆ ಸೇರಿಸಿಕೊಂಡರು. ಚೀನಾದ ವ್ಯಾಪಾರಿ ಮಹಿಳೆ ವೆಂಡಿ ಡೆಂಗಾ ಮೂರನೆ ಪತ್ನಿ, ಮಾಜಿ ಪ್ರಧಾನಿ ಟೋನಿ ಬ್ಲೇರ್‌ರೊಂದಿಗೆ ವೆಂಡಿಗೆ ನಿಕಟತೆ ಇದೆ ಎಂಬುದು ಬಹಿರಂಗವಾದೊಡನೆ ಅವರಿಬ್ಬರ ವಿಚ್ಛೇದನವಾಯಿತು. ಜೆರಿಗೆ ಇದು ಮೊದಲನೆ ಮದುವೆ. 1977ರಿಂದ ಮೈಕ್ ಜಾಗರ್‌ರೊಂದಿಗೆ ವಾಸಿಸುತ್ತಿದ್ದರೂ ಅವರಿಬ್ಬರೂ ವಿವಾಹಿತರಾಗಿರಲಿಲ್ಲ. ಈ ಸಂಬಂಧದಲ್ಲಿ ಜೆರಿಗೆ ನಾಲ್ಕು ಮಕ್ಕಳಿವೆ. ಜಾಗರ್‌ರೊಂದಿಗಿನ ಸಂಬಂಧವನ್ನು 1999ರಲ್ಲಿ ಜೆರಿ ಕೊನೆಗೊಳಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News