×
Ad

ವಿಶ್ವದ ಅತಿ ಉದ್ದದ ಸಂಪೂರ್ಣ ಮಹಿಳೆಯರೇ ನಿಭಾಯಿಸುವ ವಿಮಾನ ಹಾರಾಟಕ್ಕೆ ಸಜ್ಜು

Update: 2016-03-05 19:45 IST

ಹೊಸದಿಲ್ಲಿ,  ಮಾ 5:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಭಾರತದ ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ ಹೊಸ ಇತಿಹಾಸವೊಂದನ್ನು ನಿರ್ಮಿಸಲು ಸಜ್ಜಾಗಿದೆ. ಮಾರ್ಚ್ 6 ರಂದು  ಹೊಸದಿಲ್ಲಿಯಿಂದ ಹೊರಟು  17 ಗಂಟೆಗಳ ಪ್ರಯಾಣದ ಬಳಿಕ  ಅಮೆರಿಕದ ಸಾನ್ ಫ್ರಾನ್ಸಿಸ್ಕೋ ತಲುಪುವ ಎ ಐ 173 ವಿಶ್ವದ ಅತಿ ಉದ್ದದ ಸಂಪೂರ್ಣ ಮಹಿಳೆಯರೇ ನಿಭಾಯಿಸುವ ವಿಮಾನವೆಂಬ ಕೀರ್ತಿಗೆ ಪಾತ್ರವಾಗಲಿದೆ. 

ಈ ಪ್ರಪ್ರಥಮ ದಾಖಲೆಯ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿ, ಕಾಕ್ ಪಿಟ್ ಸಿಬ್ಬಂದಿ, ಚೆಕ್ ಇನ್ ಸಿಬ್ಬಂದಿ, ವೈದ್ಯ ಅಥವಾ ಗ್ರಾಹಕ ಸೇವೆ ಸಿಬ್ಬಂದಿ ಸಹಿತ ಎಲ್ಲ ವಿಭಾಗಳಲ್ಲೂ ಮಹಿಳೆಯರೇ ಇರಲಿದ್ದಾರೆ. ಕ್ಯಾಪ್ಟನ್ ಕ್ಷಮತಾ ಬಾಜಪಯೀ ಹಾಗು ಕ್ಯಾಪ್ಟನ್ ಶುಭಾಂಗೀ ಸಿಂಗ್ ಅವರ ನೇತ್ರತ್ವದಲ್ಲಿ ಕ್ಯಾ. ರಮ್ಯ ಕೀರ್ತಿ ಗುಪ್ತ ಹಾಗು ಕ್ಯಾ. ಅಮೃತ್ ನಾಮಧಾರಿ ಅವರು ಫಸ್ಟ್ ಆಫೀಸರ್ ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲ, ಆಪರೇಟರ್ , ಟೆಕ್ನಿಷಿಯನ್, ಇಂಜಿನಿಯರ್ , ಫ್ಲೈಟ್ ದಿಸ್ಪ್ಯಾಚರ್ ಹಾಗು ಟ್ರಿಮ್ಮರ್ - ಎಲ್ಲರೂ ಮಹಿಳೆಯರಗಿರುತ್ತಾರೆ. ಒಟ್ಟಿನಲ್ಲಿ ಟೋಟಲ್ ಮಹಿಳಾ ವಿಮಾನವಿದು ! 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News