×
Ad

ಅಯ್ಲನ್ ಸಾವು: ಇಬ್ಬರಿಗೆ 4 ವರ್ಷ ಜೈಲು

Update: 2016-03-05 22:32 IST

ಅಂಕಾರ (ಟರ್ಕಿ), ಮಾ. 5: ಕೆಲವು ತಿಂಗಳುಗಳ ಹಿಂದೆ ಟರ್ಕಿಯಿಂದ ಗ್ರೀಸ್‌ಗೆ ವಲಸೆ ಹೋಗುವ ವೇಳೆ 3 ವರ್ಷದ ಅಯ್ಲನ್ ಕುರ್ದಿ ಮತ್ತು ಇತರ ನಾಲ್ವರು ಮೃತಪಟ್ಟ ಘಟನೆಗೆ ಸಂಬಂಧಿಸಿ ಟರ್ಕಿಯ ನ್ಯಾಯಾಲಯವೊಂದು ಶುಕ್ರವಾರ ಸಿರಿಯದ ಇಬ್ಬರು ಕಳ್ಳಸಾಗಾಣಿಕೆದಾರರಿಗೆ ತಲಾ ನಾಲ್ಕು ವರ್ಷ ಮತ್ತು ಎರಡು ತಿಂಗಳುಗಳ ಜೈಲು ವಾಸದ ಶಿಕ್ಷೆಯನ್ನು ವಿಧಿಸಿದೆ.

ಟರ್ಕಿಯ ಸಮುದ್ರ ತೀರದಲ್ಲಿ ನಿರ್ಜೀವವಾಗಿ ಬೋರಲಾಗಿ ಮಲಗಿದ್ದ ಅಯ್ಲನ್‌ನ ಚಿತ್ರ ಅಂತಾರಾಷ್ಟ್ರೀಯ ಸಮುದ್ರದ ಅಂತಃಸಾಕ್ಷಿಯನ್ನು ಕದಡಿತ್ತು ಹಾಗೂ ವಲಸಿಗರ ಸಮಸ್ಯೆಗಳತ್ತ ಜಗತ್ತಿನ ಗಮನವನ್ನು ಸೆಳೆದಿತ್ತು.

ಟರ್ಕಿಯ ಬೋಡ್ರಂ ನಗರದ ನ್ಯಾಯಾಲಯವೊಂದು ಮಾನವ ಕಳ್ಳಸಾಗಾಣಿಕೆಗಾಗಿ ಈ ಇಬ್ಬರಿಗೆ ಶಿಕ್ಷೆ ವಿಧಿಸಿತು. ಆದರೆ, ಉದ್ದೇಶಪೂರ್ವಕ ನಿರ್ಲಕ್ಷದಿಂದಾಗಿ ಅವರ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪದಿಂದ ಅವರನ್ನು ಖುಲಾಸೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News