×
Ad

ಡೊನಾಲ್ಡ್ ಉದಯ: ಅಮೆರಿನ್ನರಲ್ಲಿ ಟ್ರಂಪ್ ಆತಂಕ

Update: 2016-03-06 08:49 IST

ವಾಷಿಂಗ್ಟನ್, ಮಾ.6: ಮಾನಸಿಕ ಕಾಯಿಲೆಗಳು ಹೆಚ್ಚುತ್ತಿರುವ ಅಮೆರಿಕದ ಮಂದಿಯನ್ನು ಇದೀಗ ಹೊಸ ಮಾನಸಿಕ ಕಾಯಿಲೆ ಕಾಡುತ್ತಿದೆ. ಇನ್ನೂ ಕಾರಣ ಕಂಡುಹಿಡಿಯಲು ಸಾಧ್ಯವಾಗದ "ಟ್ರಂಪ್ ಆತಂಕ"ದ ರೋಗಿಗಳು ಹೆಚ್ಚುತ್ತಿದೆ.

ಮಾನಸಿಕ ಚಿಕಿತ್ಸಕರು, ಮಸಾಜ್ ತಜ್ಞರು ಹಾಗೂ ಒತ್ತಡ ಸಂಕುಚಿತಗೊಳಿಸುವ ತಜ್ಞರು, ಈ ಬಗೆಯ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಖಚಿತಪಡಿಸಿದ್ದಾರೆ. ದೇಶದ 45ನೇ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾಗುವ ಆತಂಕ ಹಲವರನ್ನು ಕಾಡುತ್ತಿದೆ.


ಒಟ್ಟು ಮಾನಸಿಕ ರೋಗ ಪ್ರಕರಣಗಳಿಗೆ ಹೋಲಿಸಿದರೆ, ಈ ಮಾದರಿ ಚಿಕ್ಕದು ಹಾಗೂ ಪೂರ್ವ ಕರಾವಳಿಯಿಂದ ಅಧಿಕವಾಗಿ ವರದಿಯಾಗುತ್ತಿದೆ. ಇದು ಉದಾರವಾದಿ ಚಿಂತಕರ ಪ್ರಮುಖ ತಾಣವಾಗಿದೆ. ಆದರೆ ವಾಷಿಂಗ್ಟನ್ ಪೋಸ್ಟ್‌ನಿಂದ ಹಿಡಿದು ವಾಲ್‌ಸ್ಟ್ರೀಟ್ ಜರ್ನಲ್ ವರೆಗೆ ಬಹುತೇಕ ಎಲ್ಲ ಪತ್ರಿಕೆಗಳು ಈ ಮನಃಶಾಸ್ತ್ರಜ್ಞರ ವರದಿಗಳನ್ನು ಉಲ್ಲೇಖಿಸಿವೆ.

"ಇದಕ್ಕೆ ಭಾಗಶಃ ಕಾರಣವೆಂದರೆ, ಅವರು ಜನ ಆತಂಕಪಡುವಂತೆ ಮಾಡುತ್ತಿದ್ದು, ಅವರಲ್ಲೊ ಯಾವ ಆತಂಕವೂ ಇಲ್ಲ. ಇದು ನಿಜಕ್ಕೂ ಕಳವಳಕಾರಿ" ಎಂದು ಮನಃಶಾಸ್ತ್ರಜ್ಞರೊಬ್ಬರು ಹೇಳುತ್ತಾರೆ.
ಅಲಿಸನ್ ಹೊವಾರ್ಡ್ ಎಂಬ ಮನಃಶಾಸ್ತ್ರಜ್ಞ ಹೇಳುವಂತೆ ಆತಂಕಕ್ಕೆ ಇನ್ನೊಂದು ಮುಖ್ಯಕಾರಣವೆಂದರೆ, ಶ್ರೀಮಂತರು ಅಧಿಕವಾಗಿ ತೊಡಗಿಸಿಕೊಂಡಿರುವ ರಿಯಲ್ ಎಸ್ಟೇಟ್ ದಂಧೆಗೆ ಕಡಿವಾಣ ಬೀಳುವ ಆತಂಕ.


ಮಧ್ಯ ಅಮೆರಿಕದ ಕೇಂದ್ರ ಭಾಗದ ರಿಪಬ್ಲಿಕನ್ನರಲ್ಲಿ ಕೂಡಾ ಇಂಥದ್ದೇ ಆತಂಕವಿದ್ದು, ಹಿಲರಿ ಕ್ಲಿಂಟನ್ ಅಥವಾ ಬೆರ್ನಿ ಸ್ಯಾಂಡರ್ಸ್‌ ಅವರಲ್ಲಿ ಯಾರು ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಇದಕ್ಕೆ ಕಾರಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News