×
Ad

ಭಾರತ ಏಷ್ಯಾ ಚಾಂಪಿಯನ್

Update: 2016-03-06 23:17 IST

 ಮೀರ್ಪುರ, ಮಾ.6 : ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಇಂದು ಬಾಂಗ್ಲಾದೇಶ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿ ಏಷ್ಯಾ ಚಾಂಪಿಯನ್ ಎನಿಸಿಕೊಂಡಿದೆ.

ಗೆಲುವಿಗೆ 121 ರನ್‌ಗಳ ಸವಾಲನ್ನು ಪಡೆದ ಭಾರತ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಧವನ್ ಮತ್ತು ಕೊಹ್ಲಿ 2ನೆ ವಿಕೆಟ್‌ಗೆ 94 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
 
ಭಾರತದ ಶಿಖರ್ ಧವನ್60 (44ಎ,9ಬೌ,1ಸಿ), ವಿರಾಟ್ ಕೊಹ್ಲಿ ಔಟಾಗದೆ 41ರನ್ (28ಎ, 5ಬೌ), ಮಹೇಂದ್ರ ಸಿಂಗ್ ಧೋನಿ ಔಟಾಗದೆ 20ರನ್ (6ಎ, 1ಬೌ, 2ಸಿ) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರೋಹಿತ್ ಶರ್ಮ 1 ರನ್ ಗಳಿಸಿದರು.

ಏಷ್ಯಾಕಪ್‌ನಲ್ಲಿ ಭಾರತಕ್ಕೆ ಆರನೇ ಕಿರೀಟ: 1984ರಲ್ಲಿ ಚೊಚ್ಚಲ ಚಾಂಪಿಯನ್ ಆಗಿದ್ದ ಭಾರತ 2010ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿತ್ತು. ಇದೀಗ ಟ್ವೆಂಟಿ -20 ಮಾದರಿ ಕ್ರಿಕೆಟ್ ಆಗಿ ಬದಲಾಗಿರುವ ಏಷ್ಯಾಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದೆ.

ಬಾಂಗ್ಲಾದೇಶ 120/5:  ಎರಡು ಗಂಟೆ ತಡವಾಗಿ ಆರಂಭಗೊಂಡ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ 15 ಓವರ್‌ಗಳಲ್ಲಿ 5ವಿಕೆಟ್ ನಷ್ಟದಲ್ಲಿ 120 ರನ್ ಗಳಿಸಿತ್ತು.
  ಶಬ್ಬೀರ್ ರಹ್ಮಾನ್ ಮತ್ತು ಮಹ್ಮೂದುಲ್ಲಾ ಆರನೆ ವಿಕೆಟ್‌ಗೆ 45 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು ನೂರರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
 ಶಬ್ಬೀರ್ ರಹ್ಮಾನ್ ಔಟಾಗದೆ 32 ರನ್(29ಎ, 2ಬೌ) ಮತ್ತು ಮಹ್ಮೂದುಲ್ಲಾ 33 ರನ್(13ಎ,2ಬೌ,2ಸಿ) ಗಳಿಸಿದರು.

ಆರಂಭದಲ್ಲಿ ಬಾಂಗ್ಲಾದ ಆಟಗಾರರು ಸ್ಫೋಟಕ ಬ್ಯಾಟಿಂಗ್ ಕಡೆಗೆ ಗಮನ ಹರಿಸಿದರು. ಭಾರತದ ಸಂಘಟಿತ ದಾಳಿಗೆ ಸಿಲುಕಿ ತಮೀಮ್ ಇಕ್ಬಾಲ್ 13 ರನ್, ಸೌಮ್ಯ ಸರ್ಕಾರ್ 14 ರನ್, ಶಾಕಿಬ್ ಅಲ್ ಹಸನ್ 21 , ಮುಶ್ಫಿಕುರ್ರಹೀಮ್ 4 ರನ್ ಗಳಿಸಿದರೆ, ನಾಯಕ ಮಶ್ರಾಫೆ ಮುರ್ತಝ (0) ಖಾತೆ ತೆರೆಯದೆ ನಿರ್ಗಮಿಸಿದರು.
ಭಾರತದ ಪರ ಆರ್. ಅಶ್ವಿನ್, ಆಶೀಷ್ ನೆಹ್ರಾ ,ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜ ತಲಾ 1 ವಿಕೆಟ್ ಉಡಾಯಿಸಿದರು.

ಸ್ಕೋರ್ ವಿವರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News