ಭ್ರಷ್ಟಾಚಾರ: ಇರಾನ್ ಉದ್ಯಮಿಗೆ ಮರಣ ದಂಡನೆ
Update: 2016-03-06 23:52 IST
ಟೆಹರಾನ್, ಮಾ. 6: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಇರಾನ್‌ನ ಬಿಲಿಯಾಧೀಶ ವ್ಯಾಪಾರಿ ಬಬಕ್ ಝಂಜಾನಿಗೆ ಇರಾನ್‌ನ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿದೆ ಎಂದು ನ್ಯಾಯಾಂಗ ಅಧಿಕಾರಿಯೊಬ್ಬರು ರವಿವಾರ ತಿಳಿಸಿದರು.
ಈ ವ್ಯಕ್ತಿ ವಂಚನೆಯಿಂದ 2.8 ಬಿಲಿಯನ್ ಡಾಲರ್ (ಸುಮಾರು 18,762 ಕೋಟಿ ರೂಪಾಯಿ) ಗಳಿಸಿರುವುದಕ್ಕೆ ಸಂಬಂಧಿಸಿ ಸುದೀರ್ಘ ಕಾಲದಿಂದ ವಿಚಾರಣೆ ನಡೆಯುತ್ತಿತ್ತು.