ಇಮೇಲ್ ಜನಕ ರೇ ಟಾಮ್ಲಿನ್ಸನ್ ಇನ್ನಿಲ್ಲ
ನ್ಯೂಯಾರ್ಕ್ : ‘ಇಮೇಲ್ ಆವಿಷ್ಕರಿಸಿದ್ದಕ್ಕೆ ಹಾಗೂ @ ಚಿಹ್ನೆಯನ್ನು ವಿಶ್ವದ ನಕ್ಷೆಯಲ್ಲಿಬಲವಾಗಿ ಬೇರೂರಿಸಿದ್ದಕ್ಕೆ ನಿಮಗೆ ಥಾಂಕ್ಯೂ ರೇ ಟಾಮ್ಲಿನ್ಸನ್’ ಎಂದು ಜಿಮೇಲ್ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಿ ಇಹಲೋಕ ತ್ಯಜಿಸಿದ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿರುವ ಇಮೇಲ್ನ ಗಾಡ್‌ಫಾದರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.
‘ನೆಟ್‌ವರ್ಕ್ಡ್ ಕಂಪ್ಯೂಟರ್ ಯುಗದಲ್ಲಿ ಇಮೇಲ್ ಲೋಕವನ್ನು ಪರಿಚಯಿಸಿದ ರೇ ತಂತ್ರಜ್ಞಾನದ ಪ್ರವರ್ತಕ’ ಎಂದು ಅವರ ಉದ್ಯೋಗದಾತ ರೇಯ್ಥಿಯಾನ್ ಕಂಪೆನಿಯ ವಕ್ತಾರಮೈಕ್ ಡೋಬಲ್ ತಿಳಿಸಿದ್ದಾರೆ.
ಟಾಮ್ಲಿನ್ಸನ್ ಶನಿವಾರ ಬೆಳಿಗ್ಗೆ ಮೃತ ಪಟ್ಟಿರುವುದಾಗಿ ತಿಳಿಸಿದ ಡೋಬಲ್ ಅವರ ಸಾವಿಗೆ ಕಾರಣವೇನೆಂದು ತಿಳಿದಿಲ್ಲವೆಂದು ಹೇಳಿದರು. ಟೋಮ್ಲಿನ್ಸನ್ ಕಂಪೆನಿಯ ಕ್ಯಾಂಬ್ರಿಡ್ಜ್,ಮೆಸಾಚುಸೆಟ್ಸ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ತನ್ನ ವರದಿಯೊಂದರಲ್ಲಿ ಟಾಮ್ಲಿನ್ಸನ್ ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ಹೇಳಿದೆ.
ಟಾಮ್ಲಿನ್ಸನ್ 1971ರಲ್ಲಿ ಇಂಟರ್ನೆಟ್ಟಿನ ಪೂರ್ವಜ ಅರ್ಪನೆಟ್ ಇದರ ಜನಕನಾಗಿದ್ದು ಇದರ ಮೂಲಕ ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಕಂಪ್ಯೂಟರ್ಮುಖಾಂತರ ಸಂದೇಶ ಕಳುಹಿಸಬಹುದಾಗಿತ್ತು. ಅವರನ್ನು 2012ರಲ್ಲಿ ಇಂಟರ್ನೆಟ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿತ್ತು.
ಮೂಲತಃ ಆ್ಯಮ್‌ಸ್ಟರ್ಡ್ಯಾಮ್ ನಗರದವರಾದ ಟಾಮ್ಲಿನ್ಸನ್ರೆನ್ಸ್ಸೆಲೇರ್ ಪಾಲಿಟೆಕ್ನಿಕ್‌ನಲ್ಲಿ ಹಾಗೂ ಎಂಐಟಿಯಲ್ಲಿ ವಿದ್ಯಾಭ್ಯಾಸ ಪಡೆದ ನಂತರಈಗ ರೇಯ್ಥಿಯಾನ್ ಬಿಬಿಎನ್ ಟೆಕ್ನಾಲಜೀಸ್ ಎಂದು ಕರೆಯಲ್ಪಡುವ ಬೆರಾನೆಕ್ ಹಾಗೂ ನ್ಯೂಮನ್‌ನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಈಮೇಲನ್ನು ಜಗತ್ತಿಗೆ ಪರಿಚಯಿಸಿದ್ದರು.
ಟಾಮ್ಲಿನ್ಸನ್ ಅವರು 2000ರಲ್ಲಿ ಅಮೆರಿಕನ್ ಕಂಪ್ಯೂಟರ್ ಮ್ಯೂಸಿಯಂನಿಂದ ಜಾರ್ಜ್ ಆರ್ ಸ್ಟಿಬಿಟ್ಝ್ಕಂಪ್ಯೂಟರ್ ಪಯೋನಿಯರ್ ಪ್ರಶಸ್ತಿ, ವೆಬ್ಬಿ ಪ್ರಶಸ್ತಿ ಹಾಗೂ ಡಿಸ್ಕವರ್ ಮ್ಯಾಗಝೀನಿನಿಂದ ಇನ್ನೊವೇಶನ್ ಪ್ರಶಸ್ತಿ ಪಡೆದಿದ್ದರು.