ಕನ್ಹಯ್ಯ ವಿಷ ಸರ್ಪ: ಸಾಮ್ನಾದಲ್ಲಿ ಸಂಪಾದಕೀಯ ಬರೆದ ಶಿವಸೇನೆ

Update: 2016-03-07 10:32 GMT

ಮುಂಬೈ, ಮಾರ್ಚ್.7: ಶಿವಸೇನೆ ಕನ್ಹಯ್ಯರನ್ನು ವಿಷಸರ್ಪ ಎಂದು ವಿಶ್ಲೇಷಿದ್ದು ಅವರಿಗೆ ಹೇಗೆ ಜಾಮೀನು ದೊರತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದೆ. ಕನ್ಹಯ್ಯ ಬಿಡುಗಡೆಗೊಂಡ ಮೇಲೆ ದಿನಾಲೂ ಸರ್ಪದಂತೆ ವಿಷಕಾರುತ್ತಿದ್ದಾರೆ. ಬಿಜೆಪಿ ಹಾಗೂ ಅದರ ಜನರನ್ನು ಹೆದರಿಸುತ್ತಿದ್ದಾರೆ ಎಂದು ಹೇಳಿದೆ.

ಸಾಮ್ನಾದ ಸಂಪಾದಕೀಯದಲ್ಲಿ ಗುಜರಾತ್‌ನಲ್ಲಿ ಪಟೇಲ್ ಮೀಸಲಾತಿಗೆ ಆಂದೋಲನ ನಡೆಸುತ್ತಿರುವ ಹಾರ್ದಿಕ್ ಪಟೇಲ್ ವಿರುದ್ಧವೂ ದೇಶದ್ರೋಹ ಮೊಕದ್ದಮೆ ದಾಖಲಿಸಲಾಗಿದೆ. ಆದರೆ ಅವರಿಗೆ ಜಾಮೀನು ಸಿಕ್ಕಿಲ್ಲ. ಕರ್ನಲ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್‌ರಂತಹ ಜನರಿಗೂ ಜಾಮೀನು ದೊರಕಿಲ್ಲ. ಆದರೆ ಜೆಎನ್‌ಯು ಪ್ರಕರಣ ಇಷ್ಟು ಪ್ರಸಿದ್ಧಿ ಪಡೆದಿದ್ದೂ ದೇಶದ್ರೋಹದ ಮೊಕದ್ದಮೆ ದಾಖಲಿಸಿಯೂ ಆರೋಪಿಯನ್ನು ಕೇವಲ ಹತ್ತು ಹದಿನೈದು ದಿನಗಳಲ್ಲಿ ಬಿಡುಗಡೆಗೊಳಿಸಲಾಗಿದೆ ಮತ್ತು ಆತ ಹೊರಗೆ ಬಂದು ಸರಕಾರದ ಮೇಲೆ ಮಾತಿನ ದಾಳಿನಡೆಸುತ್ತಿದ್ದಾನೆ ಎಂದು ಅದರಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ವೆಂಕಯ್ಯನಾಯ್ಡು ಹೇಳುತ್ತಿದ್ದಾರೆ ಕನ್ಹಯ್ಯಾರಿಗೆ ಉಚಿತ ಪ್ರಚಾರ ಸಿಗುತ್ತಿದೆ ಹಾಗಿದ್ದರೆ ಇದಕ್ಕೆ ಯಾರೂ ಜವಾಬ್ದಾರರು ಎಂದು ಶಿವಸೇನೆ ಪ್ರಶ್ನಿಸಿದೆ. ಮಾತ್ರವಲ್ಲ ಇಪಿಎಫ್‌ಗೆ ತೆರಿಗೆ ವಿಧಿಸಿರುವುದನ್ನು ಸೂಚಿಸಿ ಸರಕಾರ ಬಡ ಶ್ರಮಿಕರ ಪ್ರಾವಿಡೆಂಟ್ ಫಂಡ್‌ಗೆ ತೆರಿಗೆ ಹಾಕಿ ಉಚಿತವಾಗಿ ಏನೂ ಸಿಗುವುದಿಲ್ಲ ಎನ್ನುತ್ತಿದೆ ಎಂದು ಶಿವಸೇನೆ ಕೇಂದ್ರದ ಬಿಜೆಪಿ ಸರಕಾರವನ್ನು ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News