ಮುಸ್ಲಿಮರು ಮಾತ್ರವಲ್ಲ ಈಗ ಹಿಂದೂಗಳು ಫತ್ವಾ ಹೊರಡಿಸುತ್ತಿದ್ದಾರೆ: ತಸ್ಲಿಮಾ ನಸ್ರೀನ್
ತಿರುವನಂತಪುರಂ, ಮಾರ್ಚ್.7: ಈಗ ಹಿಂದೂಗಳು ಫತ್ವಾಹೊರಡಿಸುತ್ತಿದ್ದಾರೆಂದು ಬಾಂಗ್ಲಾ ಲೇಖಕಿ ತಸ್ಲಿಮಾ ನಸ್ರೀನ್ ಆರೋಪಿಸಿದ್ದಾರೆ. ಭಯೋತ್ಪಾದಕರಿಂದ ಕೊಲೆ ಬೆದರಿಕೆ ಎದುರಿಸುತ್ತಿರುವ ಬರಹಗಾರ್ತಿ ಜೆಎನ್‌ಯು ವಿವಾದ ಕುರಿತು ಹೀಗೆ ಪ್ರತಿಕ್ರಿಯಿಸಿದ್ದಾರೆ. ಮುಸ್ಲಿಮರ ವಿರುದ್ಧ ಯಾವಾಗಲೂ ಉರಿಕಾರುತ್ತಿದ್ದ ಅವರು ಈಸಲ ಹಿಂದೂಗಳ ವಿರುದ್ಧ ಮಾತಾಡುವ ಧೈರ್ಯ ತಳೆದಿದ್ದಾರೆ.
ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರನ್ನು ಕೊಂದರೆ ಹನ್ನೊಂದು ಲಕ್ಷ ಬಹುಮಾನ ಮತ್ತು ನಾಲಗೆಕಿತ್ತರೆ ಐದು ಲಕ್ಷ ಬಹುಮಾನದ ಹೇಳಿಕೆಗಳನ್ನು ನೀಡುವವರ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾ ತಸ್ಲಿಮಾ ಟ್ವೀಟಿಸಿದ್ದಾರೆ. ನಾನು ಮುಸ್ಲಿಮರು ಮಾತ್ರ ಫತ್ವಾಹೊರಡಿಸುವವರೆಂದು ಭಾವಿಸಿದ್ದೆ ಈಗ ಹಿಂದೂಗಳು ಈ ಕೆಲಸಕ್ಕಿಳಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮುಸ್ಲಿಮರು ಮಾತ್ರವಲ್ಲ ಕೆಲವು ಹುಚ್ಚು ಆವೇಶದ ಹಿಂದೂಗಳು ಫತ್ವಾ ಹೊರಡಿಸುತ್ತಿದ್ದಾರೆ. ಮೊದಲು ನೀವು ನಿಮ್ಮ ಧರ್ಮವನ್ನು ಪ್ರೇಮಿಸುವಿರಿ. ಆನಂತರ ವಿವೇಕ ಮತ್ತು ಸ್ವಂತ ಬುದ್ಧಿ ಕಳೆದುಕೊಳ್ಳುವಿರಿ. ಆಮೇಲೆ ನೀವು ವಿರೋಧಿಗಳ ತಲೆಗೆ ಬೆಲೆ ಕಟ್ಟಲು ಹೊರಡುತ್ತೀರಿ. ಕನ್ಹಯ್ಯಿರ ವಿರುದ್ಧ ದಾಳಿಗಿಳಿದವರ ಕುರಿತು ತನಗೆ ಹೇಳಲಿಕ್ಕಿರುವುದು ಇಷ್ಟೇ ಎಂದು ತಸ್ಲಿಮಾ ಟ್ವೀಟಿಸಿದ್ದಾರೆ.