ಎಂಎಚ್-370 ವಿಮಾನದ ಮತ್ತೊಂದು ಭಾಗ ಲಾ ರೀ ಯುನಿಯನ್‌ನಲ್ಲಿ ಪತ್ತೆ
Update: 2016-03-07 23:01 IST
ಸೈಂಟ್ ಡೆನಿಸ್ ಡೆ ಅಲಾ ರೀ ಯುನಿಯನ್, ಮಾ.7: ಹಿಂದೂಮಹಾಸಾಗರದಲ್ಲಿ ಫ್ರಾನ್ಸ್‌ಗೆ ಸೇರಿದ ದ್ವೀಪ ಲಾ ರೀ ಯುನಿಯನ್‌ನಲ್ಲಿ ಕಳೆದ ವರ್ಷ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್-370 ವಿಮಾನದ ರೆಕ್ಕೆಯ ತುಂಡು ಭಾಗವನ್ನು ಪತ್ತೆ ಮಾಡಿರುವುದಾಗಿ ಸ್ಥಳೀಯರೊಬ್ಬರು ಹೇಳಿದ್ದಾರೆ. ನಾಪತ್ತೆಯಾಗಿದ್ದ ವಿಮಾನದ ಎರಡನೆ ಭಾಗ ಇದಾಗಿರಬಹುದು ಎಂದು ಹೇಳಿದ್ದಾರೆ.
ಜಾನಿ ಬೇಕ್ ಅವರು ಸಮುದ್ರ ದಂಡೆ ಸ್ವಚ್ಛ ಮಾಡುತ್ತಿದ್ದಾಗ ವಿಮಾನದ ಫ್ಲಾಪೆರಾನ್ ಭಾಗವನ್ನು ಕಳೆದ ಜುಲೈನಲ್ಲಿ ಕಂಡಿದ್ದಾಗಿ ಹೇಳಿದ್ದಾರೆ. ಈ ಶಂಕಿತ ವಸ್ತುವನ್ನು ಕಳೆದ ಗುರುವಾರ ತಕ್ಷಣ ಪೊಲೀಸರಿಗೆ ನೀಡಿದ್ದಾಗಿ ವಿವರಿಸಿದ್ದಾರೆ.